ಕಾಳಿ ನದಿಯಲ್ಲಿ ಓಡಲಿದೆಯೇ ವಾಟರ್‌ ಮೆಟ್ರೋ

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಫೂರ್‌ ಸಭೆ ನಡೆಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಫೂರ್‌ ಸಭೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕರಾವಳಿಯ ಉಷ್ಣಾಂಶ ಹೆಚ್ಚುತ್ತಿದ್ದು, ಅದನ್ನು ತಡೆಯಲು ತಜ್ಞರ ಜೊತೆ ಚರ್ಚಿಸಲಾಗುವುದು
  • *ತಮಿಳುನಾಡು ಪಿಚ್ಚಾವರಂ ಭಾಗದಂತೆ ಉಕ ಕರಾವಳಿಯಲ್ಲಿ ಕಾಂಡ್ಲಾ ಪ್ರದೇಶ ಬೆಳೆಯಲು ಕ್ರಮ
ಕಾರವಾರ: ಕೊಚ್ಚಿ ಮಾದರಿಯಲ್ಲಿ ಕರ್ನಾಟಕ ಕರಾವಳಿಯಲ್ಲಿ ವಾಟರ್ ಮೆಟ್ರೋ ಯೋಜನೆಯನ್ನು ಜಾರಿ ಮಾಡಲು ಅಧ್ಯಯನ ನಡೆಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.
ಮಂಡಳಿಯ ಸರ್ವಸಾಧಾರಣ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕೊಚ್ಚಿಗೆ ಹೋಗಿ ವಾಟರ್ ಮೆಟ್ರೋ ಅಧ್ಯಯನ ಮಾಡಿಕೊಂಡು ಬಂದಿದ್ದೇವೆ. ಇಲ್ಲಿ ಕಾರ್ಯಸಾಧ್ಯತಾ ಸಮೀಕ್ಷೆ ಕೈಗೊಳ್ಳಲಾಗಿದೆ. ಉತ್ತರ ಕನ್ನಡದ ಕಾಳಿ, ಅಘನಾಶಿನಿ ಹಾಗೂ ಶರಾವತಿ ನದಿಗಳು ವಾಟರ್ ಮೆಟ್ರೋ ನಡೆಸಲು ಅನುಕೂಲಕರವಾಗಿವೆ ಎಂದು ವರದಿ ಬಂದಿದೆ. ಅವುಗಳಲ್ಲಿ 23 ಸ್ಟೇಷನ್‌ಗಳನ್ನು ಗುರುತಿಸಲಾಗಿದೆ. ಟ್ರಾಫಿಕ್ ಸರ್ವೇ ನಡೆಸಿದ ನಂತರ ಡಿಪಿಆರ್ ಸಿದ್ಧಮಾಡಲು ಟೆಂಡರ್ ಕರೆಯಲಾಗುವುದು ಎಂದರು. ಈ ನದಿಗಳಲ್ಲಿ ಬ್ಯಾಟರಿ ಚಾಲಿತ ವಾಟರ್ ಮೆಟ್ರೋ ನಡೆಸುವುದು ನಮ್ಮ ಯೋಜನೆಯಾಗಿದೆ. ಡಿಪಿಆರ್ ಸಿದ್ಧವಾದ ನಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೊಚ್ಚಿ ಮಾದರಿಯಲ್ಲಿ ಹೊನ್ನಾವರ ಕಾಸರಕೋಡಿನಲ್ಲಿ ಶಿಪ್‌ಯಾರ್ಡ್ ನಿರ್ಮಾಣಕ್ಕೆ ಯೋಜನೆ ಇದೆ. ಅಲ್ಲದೇ ಪ್ರಸಾದಂ ಯೋಜನೆಯಲ್ಲಿ ಜಿಲ್ಲೆಯ ದೇವಸ್ಥಾನಗಳಿಗೆ ಸೌಲಭ್ಯ ಕಲ್ಪಿಸಲು, ಸಾಗರ ಮಾಲಾ ಯೋಜನೆಯಲ್ಲಿ ಬಂದರುಗಳ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗುವುದು. ಮಂಡಳಿಯ ಸದಸ್ಯರೂ ಆಗಿರುವ ಕರಾವಳಿಯ ಎಲ್ಲ ಸಂಸದರಿಗೂ ಈ ಸಂಬAಧ ಬೆಂಬಲ ನೀಡಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಕಾಲು ಸಂಕ ಕೊಡಿ:

ಮಳೆಗಾಲದ ಸಂದರ್ಭದಲ್ಲಿ ಶಾಲಾ ಮಕ್ಕಳು ಅನುಭವಿಸುವ ತೊಂದರೆಗಳನ್ನು ವಿವರಿಸಿದ ಶಾಸಕ ಭೀಮಣ್ಣ ನಾಯ್ಕ ಕ್ಷೇತ್ರಕ್ಕೆ ಕಾಲುಸಂಕಗಳು ಮತ್ತು ಸಂಪರ್ಕ ರಸ್ತೆ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸಬೇಕು. ಅಲ್ಲದೇ ಈ ಭಾಗದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಮಳೆಗಾಲದಲ್ಲಿ ಜಲಪಾತಗಳ ಬಳಿ ನಿಷೇಧ ಹೇರದೇ, ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರವಾಸೋದ್ಯಮ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ತಲಪಾಡಿಯಿಂದ ಕಾರವಾರದವರೆಗೆ ಕಡಲ್ಕೊರೆತ ತಡೆಗೂ ಸಹಕಾರಿಯಾಗುವಂತೆ ರಿಂಗ್ ರೋಡ್ ನಿರ್ಮಿಸಬೇಕು. ಈ ಬಗ್ಗೆ ಮಂಡಳಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದರು. ಎಂಎಲ್‌ಸಿ ಶಾಂತಾರಾಮ ಬುಡ್ನ ಸಿದ್ದಿ, ಕರಾವಳಿ ಜಿಲ್ಲೆಗಳಲ್ಲಿನ ಬುಡಕಟ್ಟು ಸಮುದಾಯದ ಜನತೆ ವಾಸ ಮಾಡುವ ಪ್ರದೇಶಗಳಿಗೆ ರಸ್ತೆ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು. ಎಂಎಲ್‌ಸಿ ಗಣಪತಿ ಉಳ್ವೇಕರ್ ಮಾತನಾಡಿ, ಮೀನುಗಾರರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಮೀನುಗಾರಿಕೆಯಲ್ಲಿ ತೊಡಗಿದಾಗ ಬಲೆ ಹಾನಿ, ದೋಣಿ ಹಾನಿಯಾದರೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಅಪರ ಜಿಲ್ಲಾಽಕಾರಿ ಸಾಜಿದ್ ಮುಲ್ಲಾ, ಕರಾವಳಿ ಅಭಿವೃದ್ದಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಇಇ ಶ್ರೀಧರ್, ಪವನ್ ಶೆಟ್ಟಿ, ವಲಯ ಅಽಕಾರಿ ಹರಿಹರ ಹರಿಕಾಂತ ಇದ್ದರು.

100 ಕೋಟಿಗೆ ಪ್ರಸ್ತಾವ

ಕರಾವಳಿ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂ. ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಮಂಡಳಿ ವ್ಯಾಪ್ತಿಗೆ 19 ಶಾಸಕರು, ಎಂಎಲ್‌ಸಿಗಳು,ನಾಲ್ವರು ಎಂಪಿಗಳು ಸೇರಿ ಒಟ್ಟು 30 ಸದಸ್ಯರು ಬರಲಿದ್ದಾರೆ. ಒಬ್ಬ ಶಾಸಕರಿಗೆ ಕನಿಷ್ಠ 1 ಕೋಟಿ ರೂ. ಅನುದಾನ ನೀಡಬೇಕು ಎಂದು ಅಽವೇಶನದಲ್ಲಿ ಧ್ವನಿ ಎತ್ತಲು ನಿರ್ಣಯಿಸಲಾಯಿತು.
ಅಧ್ಯಕ್ಷರು ಹೇಳಿದ್ದು
  • *ಕಳೆದ ಬಜೆಟ್‌ನಲ್ಲಿ 300 ವೆಂಟೆಡ್ ಡ್ಯಾಂ ಘೋಷಿಸಿದ್ದು, 100 ಡ್ಯಾಂಗಳ ನಿರ್ಮಾಣದ ಜವಾಬ್ದಾರಿಯನ್ನು ಮಂಡಳಿಗೆ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ
  • *ಕರಾವಳಿಗೆ ಐಟಿ ಪಾರ್ಕ್ ತರಲು ಮಂಗಳೂರು, ಕುಂದಾಪುರದಲ್ಲಿ ಜಾಗ ಗುರುತಿಸಲಾಗಿದೆ.
  • *ಮಂಡಳಿ ವ್ಯಾಪ್ತಿಯ ಈ ಸಾಲಿನ 10 ಕೋಟಿ ರೂ. ಕಾಮಗಾರಿಗೆ ಅನುಮೋದನೆ
  • *ಉತ್ತರ ಕನ್ನಡ ಜಿಲ್ಲೆಯ ಮೂಲ ಸೌಕರ್ಯ ಅಭಿವೃದ್ಧಿಗೆ 2.5 ಕೋಟಿ ರೂ.ಗಳ 45 ಕಾಮಗಾರಿಗಳಿಗೆ ಅನುಮೋದನೆ
  • *ಕರಾವಳಿಯ 19 ಶಾಸಕರು ಮತ್ತು ಎಂಎಲ್‌ಸಿಗಳು ಹೇಳಿದ ಕಾಮಗಾರಿಗಳನ್ನು ಕೈಗೊಳ್ಳಲು ತಲಾ 25 ಲಕ್ಷ ರೂ. ಹಂಚಿಕೆಗೆಗೆ ನಿರ್ಧಾರ
  • *ಉತ್ತರ ಕನ್ನಡ ಹಾಲಕ್ಕಿ, ಸಿದ್ದಿ ಮುಂತಾದ ಬುಡಕಟ್ಟುಗಳನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
..........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net