CNG, CBG ಸಿಎನ್‌ಜಿ, ಸಿಬಿಜಿ ಪ್ರತ್ಯೇಕವಾಗಿ ಪೂರೈಸಿ

ಗ್ರಾಹಕರಿಗೆ ಪ್ರತ್ಯೇಕವಾಗಿ ಸಿಎನ್‌ಜಿ ಹಾಗೂ ಸಿಬಿಜಿ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟ ವತಿಯಿಂದ ಮಂಗಳವಾರ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು. ಮುನ್ನಾ ಗಣೇಶಪುರ, ಸಲೀಂ ಶೇಖ್, ಉದಯಕುಮಾರ ಗೊಂದಳೆ,  ರಾಬರ್ಟ್ ಲೋಬೋ ಇತರರಿದ್ದರು.
ಗ್ರಾಹಕರಿಗೆ ಪ್ರತ್ಯೇಕವಾಗಿ ಸಿಎನ್‌ಜಿ ಹಾಗೂ ಸಿಬಿಜಿ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟ ವತಿಯಿಂದ ಮಂಗಳವಾರ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು. ಮುನ್ನಾ ಗಣೇಶಪುರ, ಸಲೀಂ ಶೇಖ್, ಉದಯಕುಮಾರ ಗೊಂದಳೆ, ರಾಬರ್ಟ್ ಲೋಬೋ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಂಡಗೋಡದಲ್ಲಿ ಕರ್ನಾಟಕ ಚಾಲಕರ ಒಕ್ಕೂಟದಿಂದ ಪ್ರತಿಭಟನೆ
ಮುಂಡಗೋಡ: ಗ್ರಾಹಕರಿಗೆ ಸಿಎನ್‌ಜಿ ಹಾಗೂ ಸಿಬಿಜಿ (CNG, CBG) ಪ್ರತ್ಯೇಕವಾಗಿ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಆಟೋ ಮತ್ತು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಜೀವನೋಪಾಯವು ನಮ್ಮ ವಾಹನಗಳ ಆದಾಯದ ಮೇಲೆ ಅವಲಂಬಿತವಾಗಿದೆ. 2022ರಲ್ಲಿ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಾರಡಗಿ ಪೆಟ್ರೋಲಿಯಂ ಪಂಪ್ ಆರಂಭವಾಗಿದೆ. ನಂತರ ಸಿಎನ್‌ಜಿ ಸ್ಟೇಷನ್ ಅನುಮತಿ ಪಡೆಯುವ ಸಂಬಂಧ ತಾಲೂಕಿನ ಆಟೋ, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಿಂದ ಸಹಿ ಪಡೆದು ಬೇಡಿಕೆ ಸಲ್ಲಿಸಿ ಸಿಎನ್‌ಜಿ ಸ್ಟೇಷನ್ ಅನುಮತಿ ಪಡೆದಿದ್ದಾರೆ.
ಪಟ್ಟಣದಲ್ಲಿ ಸಿಎನ್‌ಜಿ ಸ್ಟೇಷನ್ ಆಗಿರುವುದಿರಂದ ಇದನ್ನೇ ನಂಬಿಕೊಂಡು ಬಹುತೇಕ ಆಟೋ, ಟ್ಯಾಕ್ಸಿ ಮಾಲೀಕರು ಪೆಟ್ರೋಲ್ ವಾಹನಗಳನ್ನು ಮಾರಾಟ ಮಾಡಿ ಸಾಲ ಮಾಡಿ ಹೊಸ ಸಿಎನ್‌ಜಿ ವಾಹನಗಳನ್ನು ಖರೀದಿಸಿದ್ದಾರೆ. ಆದರೆ, ಈಗ ಸಿಎನ್‌ಜಿ ಸ್ಟೇಷನ್‌ನಲ್ಲಿ ಸಿಎನ್‌ಜಿ ಬದಲಾಗಿ ಸಿಬಿಜಿ ಇಂಧನವನ್ನು ಮಾರಾಟ ಮಾಡಲಾಗುತ್ತಿದೆ. ನಮ್ಮ ವಾಹನಗಳಿಗೆ ಸಿಎನ್‌ಜಿ ಬಳಕೆ ಮಾತ್ರ ಅನುಮತಿ ನೀಡಿದ್ದು, ಸಿಎನ್‌ಜಿ ಬದಲಾಗಿ ಬೇರೆ ಇಂಧನ ಬಳಕೆಯಿಂದ ಇಂಜಿನ್ ಅಥವಾ ಇತರೆ ತಾಂತ್ರಿಕ ತೊಂದರೆಯಾದರೆ ವಾರಂಟಿ, ಕ್ಲೇಮ್ ನೀಡಲಾಗುವುದಿಲ್ಲ ಎಂದು ಸಿಎನ್‌ಜಿ ಮ್ಯಾನುಫಾಕ್ಟರಿಂಗ್ ಕಂಪನಿಗಳು ಸ್ಪಷ್ಟಪಡಿಸಿವೆ.
ಆದ್ದರಿಂದ ಆಟೋ ಮತ್ತು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಜೀವನೋಪಾಯದ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಂಡು ಸಿಎನ್‌ಜಿ ಸ್ಟೇಷನ್‌ನಲ್ಲಿ ಸಿಎನ್‌ಜಿ ಬೇಕಾದ ಗ್ರಾಹಕರಿಗೆ ಸಿಎನ್‌ಜಿ ಹಾಗೂ ಸಿಬಿಜಿ ಬೇಕಾದವರಿಗೆ ಸಿಬಿಜಿ ಇಂಧನವನ್ನು ಪ್ರತ್ಯೇಕವಾಗಿ ಪೂರೈಸುವ ವ್ಯವಸ್ಥೆ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮುನ್ನಾ ಗಣೇಶಪುರ, ತಾಲೂಕಾಧ್ಯಕ್ಷ ಸಲೀಂ ಶೇಖ್, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಗೊಂದಳೆ, ಆಟೋ ಸಂಘದ ಅಧ್ಯಕ್ಷ ರಾಬರ್ಟ್ ಲೋಬೋ, ಲಿಂಗರಾಜ ಕಣ್ಣೂರ, ಮಂಜುನಾಥ ಈಟಿ, ಇಂತಿಯಾಜ್ ಅಲ್ಲಾಭಕ್ಷ, ರಫೀಕ್ ಇಂಗಳಗಿ, ಬಸವರಾಜ ಇಂದೂರ, ರಮೇಶ ಇಂದೂರ, ಮದಾರ ಕಿಣಿ ಸೇರಿದಂತೆ ನೂರಾರು ಮಾಲೀಕರು ಹಾಗೂ ಚಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net