ಚಿರಾಗ್‌ ಕೊಠಾರಕರ್‌ಗೆ ಜಾಮೀನು ಮಂಜೂರು

ರೀಶೆಲ್‌ ಡಿಸೋಜಾ
ರೀಶೆಲ್‌ ಡಿಸೋಜಾ
Published on
ಕಾರವಾರ: ಯುವತಿಗೆ ಕಿರುಕುಳ ನೀಡಿ, ಆತ್ಮಹತ್ಯೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಚಿರಾಗ್ ಕೊಠಾರಕರ್ ಗೆ ಹೈಕೋರ್ಟ್ ಧಾರವಾಡ ಪೀಠವು ಗುರುವಾರ ಜಾಮೀನು ಮಂಜೂರು ಮಾಡಿದೆ.
1 ಲಕ್ಷ ರೂ. ಬಾಂಡ್ ಹಾಗೂ ಇಬ್ಬರು ಜಮೀನುದಾರರ ಸಹಿಯೊಂದಿಗೆ ಜಾಮೀನು ನೀಡಲಾಗಿದೆ. ಜನವರಿ 9 ರಂದು ಕದ್ರಾದ ರೀಶೆಲ್ ಡಿಸೋಜಾ ಎಂಬ ಯುವತಿ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಸಾವಿಗೆ ಆಕೆಯ ಪ್ರಿಯತಮ, ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಅವರ ಪುತ್ರ ಚಿರಾಗ್ ಕೊಠಾರಕರ್ ಕಾರಣ ಎಂದು ಪಾಲಕರು ಆರೋಪಿಸಿದ್ದರು. ಕದ್ರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಚಿರಾಗ್ ನಾಪತ್ತೆಯಾಗಿದ್ದ. ಆತನನ್ನು ಬಂಧಿಸುವಂತೆ ಕ್ರೈಸ್ತ ಘಟನೆಗಳು ಪ್ರತಿಭಟನೆ ನಡೆಸಿದ್ದವು. ಸಾಕಷ್ಟು ಹುಡುಕಾಟದ ಬಳಿಕ ಜ. 30.ರಂದು ಚಿರಾಗ್ ನನ್ನು ಪೊಲೀಸರು ಚೆನ್ನೆನಲ್ಲಿ ಬಂಧಿಸಿದ್ದರು. ಕಾರವಾರ ಜಿಲ್ಲಾ ನ್ಯಾಯಾಲಯ ಚಿರಾಗ್ ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.\
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net