ರಷ್ಮಿ ಕುಟುಂಬ ದುಖಃದ ಕಡಲಲ್ಲಿ ಮುಳುಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ರಷ್ಮಿ ತನ್ನ ಕನಸು ನನಸಾಗಿಸಲು ಬೆಂಗಳೂರಿಗೆ ತೆರಳಿದ್ದಳು. ಕ್ರಿಸ್‌ಮಸ್ ರಜೆಯನ್ನು ಎರಡು ದಿನ ಗೋಕರ್ಣದಲ್ಲಿ ಸ್ನೇಹಿತೆಯರ ಜೊತೆ ಕಳೆದು, ನಂತರ ತನ್ನ ಊರು ಶಿರಾಲಿಗೆ ಬರುವ ಯೋಚನೆಯಲ್ಲಿದ್ದಳು. ಆದರೆ, ಆಕೆಗೆ ರಜೆಯೇ ಸಜೆಯಾಗಿದೆ.