ಮಲ್ಲಿಕಾರ್ಜುನ ಶಿವಪ್ಪ ಕಡ್ಲಿ ಇವರ ಹೆಸರಿನಲ್ಲಿದ್ದ ಲಾರಿಯಲ್ಲಿ ಸುಮಾರು 5 ಲಕ್ಷ ಮೌಲ್ಯದ 10 ಎತ್ತುಗಳನ್ನು ಹತ್ಯೆ ಉದ್ದೇಶಕ್ಕೆ ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದೆ. ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ನಡೆದ ದಾಳಿಯಲ್ಲಿ ಪೊಲೀಸರು 10 ಎತ್ತು ಹಾಗೂ 15 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.