ಯಲ್ಲಾಪುರ: ತಾಲೂಕಿನ ಶಿರಸಿ ರಸ್ತೆಯ ಅಕ್ಕಪಕ್ಕ 20ಕ್ಕೂ ಹೆಚ್ಚು ಹೊಂಡಗಳಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಉಮ್ಮಚಗಿ, ಕಂಪ್ಲಿ, ಹಾಸಣಗಿ ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಯಲ್ಲಾಪುರ&ಶಿರಸಿ ಮಾರ್ಗದ ಅಕ್ಕಪಕ್ಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಹೊಂಡಗಳು ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಸವಾರರ ಜೀವ ಹರಣಕ್ಕಾಗಿ ಬಾಯ್ತೆರೆದು ಕುಳಿತಿವೆ.
ಗ್ರಾಪಂಗಳಿಗೆ ಇಂರ್ಟನೆಟ್ ನೀಡಲು ಭಾರತ್ ನೆಟ್ ಎಂಬ ಕಂಪನಿ ರಸ್ತೆಯ ಅಕ್ಕಪಕ್ಕದಲ್ಲಿ ಕೇಬಲ್ ಅಳವಡಿಕೆಗಾಗಿ ಮಷಿನ್ ಮೂಲಕ ತೋಡಿದ ಹೊಂಡಗಳು ಇದಾಗಿದ್ದು, ಕೇಬಲ್ ಸೇರಿಸಿದ ನಂತರ ಕಾಮಿರ್ಕರು ಕಾಟಾಚಾರಕ್ಕೆ ಮಣ್ಣು ಮುಚ್ಚಿ ಹೊರಟು ಹೋಗಿದ್ದಾರೆ.
ಇದು ನಡೆದದ್ದು ಮಳೆಗಾಲಕ್ಕೂ ಮೊದಲು. ಈಗ ಮಳೆ ಸುರಿದ ನಂತರ ಬಹುತೇಕ ಹೊಂಡಗಳು ಯಮ ಸ್ವರೂಪಿಗಳಾಗಿ ಬಾಯ್ತೆರೆದುಕೊಂಡಿವೆ. ಮುಖ್ಯವಾಗಿ ಉಮ್ಮಚಗಿ ಪಕ್ಕದ ಹೊರ್ಮನೆ ಟ್ಟದಲ್ಲಿ ಮತ್ತು ಗೋರ್ಸಗದ್ದೆ ಟ್ಟದಲ್ಲಿನ ಕೆಲವು ಹೊಂಡಗಳು ತೀರಾ ಅಪಾಯಕಾರಿಯಾಗಿವೆ. ಅಪಘಾತಗಳು ಸಂಭವಿಸುವ ಮೊದಲು ಇವುಗಳನ್ನು ಸರಿಯಾಗಿ ಮುಚ್ಚಬೇಕೆಂಬುದು ಸ್ಥಳಿಯರ ಆಗ್ರಹವಾಗಿದೆ.