ಮಧುಕೇಶ್ವರ ದೇವಾಲಯಕ್ಕೆ ಬಸ್​ ಸಂಚಾರ ಆರಂಭ

ಶಿರಸಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಾಲಯದವರೆಗೂ ಬಸ್​ ಸಂಚಾರದ ಸಂದರ್ಭ.
ಶಿರಸಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಾಲಯದವರೆಗೂ ಬಸ್​ ಸಂಚಾರದ ಸಂದರ್ಭ.
Published on
ಶಿರಸಿ: ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದವರೆಗೂ ಈಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್​ ಸಂಚರಿಸಲು ಆರಂಭಿಸಿದ್ದು, ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಿದೆ.
ಬನವಾಸಿ ಬಸ್​ ನಿಲ್ದಾಣ ಮುಖ್ಯ ದ್ವಾರದ ಬಳಿ ಇದ್ದು, ಇದುವರೆಗೂ ಇಲ್ಲಿಯವರೆಗೆ ಮಾತ್ರ ಬಸ್​ ಸೌಲಭ್ಯವಿತ್ತು. ಆದರೆ, ಬಸ್​ ನಿಲ್ದಾಣದಿಂದ ದೇವಸ್ಥಾನದವರೆಗೆ ಪ್ರವಾಸಿಗರು ಸುಮಾರು ಎರಡು ಕಿಮೀ ನಡೆದು ಹೋಗಬೇಕಿತ್ತು. ಕೆಲವರ್ಷಗಳ ಹಿಂದೆ ದೇವಸ್ಥಾನದವರೆಗೂ ಬಸ್​ ತೆರಳುತ್ತಿದ್ದ ಕಾರಣ ಈಗ ಮತ್ತೆ ಅಲ್ಲಿಯವರೆಗೂ ಬಸ್​ ಬಿಡುವಂತೆ ಬನವಾಸಿ ಪ್ರತ್ಯೇಕ ತಾಲೂಕು ಹೋರಾಟ ಸಮಿತಿ ಆಗ್ರಹಿಸಿತ್ತು. ಈ ಕುರಿತಂತೆ ಜಾಗದ ಮತ್ತು ರಸ್ತೆ ಸ್ಥಿತಿಗತಿಯನ್ನು ಪರಿಶೀಲಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ದೇವಸ್ಥಾನದವರೆಗೂ ಬಸ್​ ಬಿಡಲು ಒಪ್ಪಿಗೆ ಸೂಚಿಸಿದ್ದರಲ್ಲದೇ, ಸೋಮವಾರದಿಂದ ಈ ಸೇವೆ ಆರಂಭಿಸುವುದಾಗಿ ತಿಳಿಸಿದ್ದರು. ಪ್ರಯಾಣಿಕರ ಸೌಲಭ್ಯದ ದೃಷ್ಟಿಯಿಂದ ಭಾನುವಾರದಿಂದಲೇ ಈ ಸೇವೆ ಆರಂಭಿಸಿದ್ದಾರೆ.
ಸಾರ್ವಜನಿಕರ ಬೇಡಿಕೆಗೆ ರಸ್ತೆ ಸಾರಿಗೆ ಸಂಸ್ಥೆ ಸ್ಪಂದಿಸಿರುವ ಬಗ್ಗೆ ಹೋರಾಟ ಸಮಿತಿ ಅಧ್ಯ ಉದಯಕುಮಾರ್​ ಕಾನಳ್ಳಿ, ಗೌರವಾಧ್ಯ ಸಿ. ಎ್​. ನಾಯಕ ಮಾಳಂಜಿ, ಕಾರ್ಯದಶಿರ್ ವಿಶ್ವನಾಥ್​ ಓಡೆಯರ್​ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net