ಸುಳಗೇರಿ ಬಸ್‌ ಸೇವೆ ಮರು ಪ್ರಾರಂಭ

ಸುಳಗೇರಿ ಗ್ರಾಮಕ್ಕೆ ಬಸ್‌ ಸೇವೆ ಮರು ಪ್ರಾರಂಭವಾಯಿತು.
ಸುಳಗೇರಿ ಗ್ರಾಮಕ್ಕೆ ಬಸ್‌ ಸೇವೆ ಮರು ಪ್ರಾರಂಭವಾಯಿತು.
Published on
ಕಾರವಾರ: ಕಳೆದ 8 ತಿಂಗಳಿನಿಂದ ಸ್ಥಗಿತವಾಗಿದ್ದ ಸುಳಗೇರಿ ಬಸ್ ಸೇವೆ ಮಂಗಳವಾರ ಮರು ಪ್ರಾರಂಭವಾಯಿತು. ಸಾಯಂಕಾಲ 5.45 ಕ್ಕೆ ಕಾರವಾರ ಬಸ್ ನಿಲ್ದಾಣದಿಂದ ಹೊರಡುವ ಬಸ್ ಸುಳಗೇರಿಯಲ್ಲಿ ರಾತ್ರಿ ಉಳಿಯಲಿದೆ. ನಂತರ ಮರುದಿನ ಬೆಳಗ್ಗೆ 6 ಗಂಟೆಗೆ ಸುಳಗೇರಿಯಿಂದ ಹೊರಡುವ ಬಸ್ ಕಾರವಾರ ತಲುಪಲಿದೆ. ಸುಳಗೇರಿ ಗ್ರಾಮಕ್ಕೆ ಬಸ್ ಇಲ್ಲದ ಕಾರಣ ಆಗುತ್ತಿರುವ ಸಮಸ್ಯೆ ಬಗ್ಗೆ ವಿಜಯವಾಣಿ ಫೆ.24 ರಂದು ಹಾಗೂ ಈ ಮೊದಲೂ ವರದಿಗಳನ್ನು ಪ್ರಕಟಿಸಿತ್ತು.
ಕದ್ರಾ-ಕೊಡಸಳ್ಳಿ ಗ್ರಾಮದ ನಡುವೆ ಸುಳಗೇರಿ ಗ್ರಾಮವಿದೆ. 2025 ರ ಜು.2 ರಂದು ಮಾರ್ಗ ಮಧ್ಯೆ ಗುಡ್ಡ ಕುಸಿತ ಉಂಟಾಗಿತ್ತು. ವಾಹನ ಸಂಚಾರ ಸುಮಾರು 1 ತಿಂಗಳು ಬಂದ್ ಆಗಿತ್ತು. ಬಸ್ ಗ್ರಾಮದಲ್ಲೇ ಸಿಕ್ಕಿಕೊಂಡಿತ್ತು. ನಂತರ ವಾಹನ ಸಂಚಾರಕ್ಕೆ ಮಾರ್ಗ ತೆರವಾಗಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಬಸ್ ಬಿಟ್ಟಿರಲಿಲ್ಲ. ಮಿನಿ ಬಸ್ ಓಡಾಟ ಮಾಡಲು ಅವಕಾಶ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಓಡಾಟಕ್ಕೆ ಮಿನಿ ಬಸ್ ಇಲ್ಲ ಎಂಬ ಕಾರಣ ನೀಡಿ ಎನ್‌ಡಬ್ಲುಕೆಆರ್‌ಟಿಸಿ ಬಸ್ ಸೇವೆ ಪ್ರಾರಂಭಿಸಲು ಹಿಂದೇಟು ಹಾಕಿತ್ತು.

ಸೈಲ್ ಪ್ರಯತ್ನ

ಸುಳಗೇರಿ ಗ್ರಾಮಕ್ಕೆ ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಕುರಿತು ಶಾಸಕ ಸತೀಶ ಸೈಲ್ ಸ್ಪಂದನೆ ನೀಡಿದ್ದರು. ಸೋಮವಾದ ಸುದ್ದಿಗೋಷ್ಠಿಯಲ್ಲಿ ವಿಜಯವಾಣಿ ಗಮನ ಸೆಳೆದಾಗ ತಕ್ಷಣ ಎನ್‌ಡಬ್ಲುಕೆಆರ್‌ಟಿಸಿ ಎಂಡಿ ಪ್ರಿಯಾಂಗಾ ಅವರಿಗೆ ಕರೆ ಮಾಡಿ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದರು. ಅಲ್ಲದೇ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಕರೆ ಮಾಡಿ, ದೊಡ್ಡ ಬಸ್ ಓಡಾಟಕ್ಕೆ ಇದ್ದ ನಿರ್ಬಂಧವನ್ನು ತೆರವು ಮಾಡುವಂತೆ ಒತ್ತಾಯಿಸಿದ್ದರು. ಜಿಲ್ಲಾಽಕಾರಿ ಸುಳಗೇರಿಗೆ ಮಿನಿ ಬಸ್ ಓಡಿಸಿ ಎಂಬ ಷರತ್ತನ್ನು ತೆರವು ಮಾಡಿದ್ದು, ಸುಳಗೇರಿಗೆ ಬಸ್ ಸೇವೆ ಮರು ಪ್ರಾರಂಭವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net