ಬಸ್‌ಗಳ ನಡುವೆ ಡಿಕ್ಕಿ 40 ಕ್ಕೂ ಹೆಚ್ಚು ಜನರಿಗೆ ಗಾಯ

ಜೊಯಿಡಾದಲ್ಲಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ
ಜೊಯಿಡಾದಲ್ಲಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ
Published on
ಜೊಯಿಡಾ:ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 50 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಜೊಯಿಡಾ-ದಾಂಡೇಲಿ ರಸ್ತೆಯ ತಾಲೂಕಿನ ಚಾಪೋಲಿ ಸಮೀಪ ಗುರುವಾರ ಬೆಳಗ್ಗೆ ನಡೆದಿದೆ.
ಉಳವಿ- ಇಚಲಕರಂಜಿ, ಬೆಳಗಾವಿ-ಕಾರವಾರ ಎನ್‌ಡಬ್ಲುಕೆಆರ್‌ಟಿಸಿ ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಶಾಲೆ ವಿದ್ಯಾರ್ಥಿಗಳೂ ಸೇರಿ ಎರಡೂ ಬಸ್‌ಗಳ ಪ್ರಯಾಣಿಕರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯವಾದ ಒಬ್ಬರನ್ನು ಧಾರವಾಡಕ್ಕೆ, ಇನ್ನಿಬ್ಬರನ್ನು ಕಾರವಾರಕ್ಕೆ ಸಾಗಿಸಲಾಗಿದೆ. ಉಳಿದವರಿಗೆ ಜೊಯಿಡಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜೊಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net