ಗ್ರಾಮೀಣ ಭಾಗದ ಟವರ್ ಸಮಸ್ಯೆಯನ್ನು ಸಂಸದರ ಗಮನಕ್ಕೆ ತಂದು ಸರಿಯಾಗಿ ಕ್ರಮ ಕೈಗೊಳ್ಳುವಂತೆ ಮಾಡಬೇಕಿದ್ದ ಕಾರ್ಯಕರ್ತರು, ಮುಖಂಡರು ಕ್ರೆಡಿಟ್ ಕಿತ್ತಾಟದಲ್ಲಿ ತೊಡಗಿದ್ದಾರೆ. ಟವರ್‌ಗಳನ್ನು ಹಿಂದಿನ ಸಂಸದ ಅನಂತಕುಮಾರ ಹೆಗಡೆ ಮಂಜೂರಿ ಮಾಡಿಸಿದ್ದಾರೆ ಎಂದು ಅವರ ಬಣದವರು ಹೇಳುತ್ತಿದ್ದಾರೆ. ಮಂಜೂರಿ ಮಾಡಿಸಿದರೆ ಸಾಲದು, ಕೆಲಸ ಮುಂದುವರಿದು, ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಈಗಿನ ಸಂಸದ ಕಾಗೇರಿ ಅವರ ಪಾತ್ರ ಮುಖ್ಯವಾದದ್ದು ಎಂಬುದು ಕಾಗೇರಿ ಬಣದವರ ವಾದವಾಗಿದೆ.ಒಟ್ಟಾರೆ ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬ ಮಾತು ಬಿಎಸ್‌ಎನ್‌ಎಲ್ ಟವರ್ ವಿಷಯದಲ್ಲಿಯೂ ಸತ್ಯವಾಗಿದೆ. ಸರ್ಕಾರ ಟವರ್ ನೀಡಿದರೂ, ಅದರ ಪ್ರಯೋಜನ ಜನರಿಗೆ ಸಿಗುವಂತೆ ಮಾಡುವಲ್ಲಿ ಅಧಿಕಾರಿಗಳು ಅಡ್ಡಿಯಾಗಿದ್ದಾರೆ.