School: ಗಡಿ ಶಾಲೆಗಳಿಗಿಲ್ಲ ಕಾಯಂ ಶಿಕ್ಷಕರು

ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆ (School).
ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆ (School).
Published on

ಪ್ರಮುಖ ಮುಖ್ಯಾಂಶಗಳು

  • ಭಾಷಾ ವಿಷಯಗಳಿಗೆ ಉಪನ್ಯಾಸಕರ ಕೊರತೆ
  • ಟಿಇಟಿ ನಂತರ ನೇಮಕದ ಭರವಸೆ
  • ಅತಿಥಿ ಶಿಕ್ಷಕರ ಮೂಲಕ ಸರಿದೂಗಿಸಿಕೊಳ್ಳುವ ಕಾರ್ಯ
ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ವಿಶೇಷವಾಗಿ ಭಾಷಾ ವಿಷಯಗಳಿಗೆ ಕಾಯಂ ಶಿಕ್ಷಕರ ಕೊರತೆ ಇದ್ದು, ಅತಿಥಿ ಉಪನ್ಯಾಸಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.
ಕಾಯಂ ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡಬೇಕು ಎಂಬ ಆಗ್ರಹ ಪಾಲಕರಿಂದ ಕೇಳಿ ಬರುತ್ತಿದೆ.
ಪ್ರೌಢಶಾಲಾ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 90 ಪ್ರೌಢ ಶಾಲೆಗಳಲ್ಲಿ 778 ಶಿಕ್ಷಕ ಹುದ್ದೆಗಳವೆ.
ಅವುಗಳಲ್ಲಿ 511 ಶಿಕ್ಷಕರಿದ್ದು, ಖಾಲಿ ಇರುವ 157 ಹುದ್ದೆಗಳನ್ನು ಅತಿಥಿ ಶಿಕ್ಷಕರ ಮೂಲಕ ಸರಿದೂಗಿಸಿಕೊಳ್ಳುವ ಕಾರ್ಯ ಶಿಕ್ಷಣ ಇಲಾಖೆ ನಡೆಸಿದೆ.
ಮಾತೃಭಾಷೆ ಕನ್ನಡಕ್ಕೆ 89 ಶಿಕ್ಷಕರ ಹುದ್ದೆಗಳದ್ದರೂ 75 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 14 ಶಿಕ್ಷಕರ ಕೊರತೆ ಇದೆ. ಮುಖ್ಯವಾಗಿ ಗಡಿ ಪ್ರದೇಶಗಳಾದ ಜೊಯಿಡಾ ತಾಲೂಕಿನಲ್ಲಿ ಮೂರು ಶಿಕ್ಷಕರ ಹುದ್ದೆ, ಹಳಿಯಾಳದಲ್ಲಿ ರು ಹುದ್ದೆಗಳು ಖಾಲಿ ಇವೆ.
ಇಂಗ್ಲಿಷ್ ಭಾಷೆಯಲ್ಲಿ 83 ಹುದ್ದೆಗಳಿದ್ದರೂ 65 ಹುದ್ದೆಗಳು ಭರ್ತಿ ಇವೆ. ಇಲ್ಲೂ ಸಹ ಜೊಯಿಡಾದಲ್ಲಿ 4 ಹುದ್ದೆ, ಹಳಿಯಾಳದಲ್ಲಿ 6 ಹುದ್ದೆ, ಶಿರಸಿ ಮತ್ತಿತರ ಕಡೆಗಳಲ್ಲಿ 8 ಸೇಇ ಒಟ್ಟು 18 ಹುದ್ದೆಗಳು ಖಾಲಿ ಇವೆ.
ಹಿಂದಿ ಭಾಷೆಗೆ 71 ಶಿಕ್ಷಕ ಹುದ್ದೆಯಿದ್ದರೂ 61 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 10 ಶಿಕ್ಷಕರ ಕೊರತೆ ಇದೆ. ಇಲ್ಲೂ ಸಹ ಜೊಯಿಡಾ ಮತ್ತು ಹಳಿಯಾಳದಲ್ಲಿ ತಲಾ ನಾಲ್ಕು ಶಿಕ್ಷಕ ಹುದ್ದೆಗಳು ಖಾಲಿ ಇವೆ.
ಕೆಲ ವಿಷಯಗಳಗೆ ಅತಿಥಿ ಶಿಕ್ಷಕರೂ ಸಹ ಲಭಿಸದೇ ಶಾಲೆಯ ಉಳಿದ ಶಿಕ್ಷಕರೇ ಈ ವಿಷಯವನ್ನೂ ಅನಿವಾರ್ಯವಾಗಿ ನಿಭಾಯಿಸುತ್ತಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲೂ ಕೊರತೆ

ಇನ್ನು ಪ್ರಾಥಮಿಕ ಶಾಲೆಗಳಲ್ಲಿ 3,29 ಶಿಕ್ಷಕರ ಹುದ್ದೆ ಮಂಜೂರಾಗಿವೆ. ಅವುಗಳಲ್ಲಿ 2,286 ಶಿಕ್ಷಕ ಹುದ್ದೆಗಳು ಭರ್ತಿ ಇದ್ದು, 943 ಹುದ್ದೆಗಳು ಖಾಲಿ ಇವೆ. ಇಲ್ಲೂ ಸಹ ಜಿಲ್ಲೆಯ ಗಡಿ ಭಾಗದ ಶಾಲೆಗಳಲ್ಲಿಯೇ ಶಿಕ್ಷಕರ ಕೊರತೆ ಜಾಸ್ತಿ ಇದೆ.
ಜೊಯಿಡಾ, ದಾಂಡೇಲಿ ಭಾಗದ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅತಿಥಿ ಉಪನ್ಯಾಸಕರೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಲ್ಲಿಯ ಹಳ್ಳಿಗಳಲ್ಲಿ ಮೂಲ ಸೌಲಭ್ಯ ಕೊರತೆ, ವಿದ್ಯಾರ್ಥಿಗಳ ಕೊರತೆಯ ಕಾರಣ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರೂ ಶಿರಸಿ ಅಥವಾ ಮುಂಡಗೋಡ ಭಾಗದ ಶಾಲೆಗಳಿಗೆ ವರ್ಗ ಮಾಡಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.
ಒಂದೇ ಉಪಾಧ್ಯಾಯರನ್ನು ಹೊಂದಿರುವ ಶಾಲೆಗಳಲ್ಲಿ ಶಿಕ್ಷಕಿಯರು ನಿತ್ಯ ಶಾಲೆಗೆ ತೆರಳುವುದು ಕಷ್ಟ. ಹೀಗಾಗಿ, ಶಿರಸಿ, ಸಿದ್ದಾಪುರ ಅಥವಾ ಮುಂಡಗೋಡ ಭಾಗದ ಶಾಲೆಗಳಗೆ ವರ್ಗಾವಣೆ ಮಾಡಿಸಿಕೊಡಿ ಎಂಬುದು ಶಿಕ್ಷಕರ ಅಳಲು.
ಎರಡು ವರ್ಷಗಳಿಂದಿಲ್ಲ ನೇಮಕಾತಿ
ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿಯನ್ನು ಕಳೆದ ಎರಡು ವರ್ಷಗಳಿಂದ ನಡೆಸದಿರುವುದು ಇಲ್ಲಿಯ ಶಿಕ್ಷಕರ ಕೊರತೆಗೆ ಕಾರಣವಾಗಿದೆ. 2022ರಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಿದ ಬಳಿಕ ಮತ್ತೆ ನೇಮಕಾತಿಯಾಗಿಲ್ಲ.
ಶಿಕ್ಷಕ ನಿವೃತ್ತಿ, ವಿವಿಧ ಕಾರಣಗಳಿಂದ ಖಾಲಿಯಾದ ಹುದ್ದೆಗಳಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಈ ವರ್ಷ ಅವಕಾಶ ನೀಡಿದೆ.
ಆದರೆ, ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ, ಚಿತ್ರಕಲೆ ಇನ್ನಿತರ ವಿಷಯಗಳಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ಇಲ್ಲ.
ಈ ವರ್ಷ ಡಿಸೆಂಬರ್ ತಿಂಗಳನಲ್ಲಿ ಟಿಇಟಿ ಪರೀಕ್ಷೆ ನಡೆಯಲಿದ್ದು, ಆ ಬಳಕ ಶಿಕ್ಷಕರನ್ನು ನೇಮಿಸಿಕೊಳ್ಳಬಹುದು ಎಂಬ ಆಶಯದಲ್ಲಿ ಪಾಲಕರು ಮತ್ತು ಶಿಕ್ಷಣ ಇಲಾಖೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net