ಧಗಧಗನೆ ಹೊತ್ತಿ ಉರಿದ ಬೋಟ್‌

ಬೋಟ್‌ ಧಗಧಗ ಹೊತ್ತಿ ಉರಿಯಿತು
ಬೋಟ್‌ ಧಗಧಗ ಹೊತ್ತಿ ಉರಿಯಿತು
Published on
ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾ ಬಂದರಿನಲ್ಲಿ ಬೋಟ್‌ನಲ್ಲಿ ವೆಲ್ಡಿಂಗ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿಗೆ ತಗುಲಿ ಬೋಟು ಸುಟ್ಟು ಹಾನಿಯಾದ ಘಟನೆ ಮಂಗಳವಾರ ಸಂಭವಿಸಿದೆ.
ಕಾಸರಗೋಡು ಟೊಂಕದ ಶಕೀರಾ ಅಯೂಬ್ ಸಾಬ್ ಇವರ ಮಾಲೀಕತ್ವದ ಪಶ್ಚಿಯನ್ ಬೋಟ್ ಬೆಂಕಿಗೆ ಆಹುತಿಯಾಗಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧ ಹಿನ್ನಲೆಯಲ್ಲಿ ಬೋಟ್ ದುರಸ್ತಿ ಕಾರ್ಯ ನಡೆಯುತ್ತಿತ್ತು. ಬೋಟ್ ವೆಲ್ಡಿಂಗ್ ಮಾಡುವಾಗ ತಳ ಭಾಗದಲ್ಲಿ ಕಿಡಿ ಹೊತ್ತುಕೊಂಡು ತಿವ್ರಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ.
ಬೆAಕಿ ಹೊತ್ತಿಕೊಂಡ ಆರಂಭದಲ್ಲಿ ಮೀನುಗಾರರು ಬೆಂಕಿ ನಂದಿಸಲು ಪ್ರಯತ್ನಿಸಿದರು. ನಂತರ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ಕರಾವಳಿ ಕಾವಲು ಪಡೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net