ಕಾಂಗ್ರೆಸ್‌ಗೆ ಮಹಿಳೆಯರು ಪಾಠ ಕಲಿಸುತ್ತಾರೆ

ಕಾರವಾರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸಭೆ ನಡೆಯಿತು.
ಕಾರವಾರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸಭೆ ನಡೆಯಿತು.
Published on
ಕಾರವಾರ: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ನಿಂತು ಈ ದೇಶದ ಮಹಿಳೆಯರನ್ನು ಅವಮಾನ ಮಾಡಿದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಗೆ ಬರುವ ಚುನಾವಣೆಯಲ್ಲಿ ಬ್ಯಾಲೆಟ್ ಮೂಲಕ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಹೇಳಿದರು.
ನಾರಿ ಶಕ್ತಿ ಫೋರಂನಿಂದ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಜನಾಕ್ರೋಶ ಮಹಿಳಾ ಸಭೆ ಉದ್ಘಾಟಿಸಿ, ಅವರು ಮಾತನಾಡಿದರು.
ಅಂದು ಅಪರೇಷನ್ ಸಿಂಧೂರದ ನೇತೃತ್ವ ವಹಿಸಿದ್ದ ನಮ್ಮ ಸೇನಾಪಡೆಗಳ ಹೆಮ್ಮೆಯ ಮಹಿಳೆಯರು ಬುಲೆಟ್ ಮೂಲಕ್ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರು. ಇಂದು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ಪಾಠ ಕಲಿಸಲಿದ್ದಾರೆ ಎಂದರು.
ನಮ್ಮ ರಾಮಾಯಣ, ಮಹಾಭಾರತ ಹಾಗೂ ಇತಿಹಾಸದಲ್ಲಿ ಮಹಿಳೆಯರನ್ನು ಅವಮಾನಿಸಿದರೆ ಏನೆಲ್ಲ ಆಗಲಿದೆ ಎನ್ನುವುದನ್ನು ನಾವು ನೋಡಿದ್ದೇವೆ. ಈಗ ಅದೇ ರೀತಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಽಸಿ ಮಹಿಳೆಯರನ್ನು ಅವಮಾನಿಸಿವೆ. ಇದಕ್ಕೆ ಮಹಿಳೆಯರು ತಕ್ಕ ಉತ್ತರ ಹೇಳಲಿದ್ದಾರೆ ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ರೂಪಾಲಿ ಎಸ್.ನಾಯ್ಕ, ಮಗು ಅತ್ತಾಗ ಚಾಕಲೇಟ್ ಕೊಡುತ್ತೇವೆ. ಹಾಗೂ ಮಹಿಳೆಯರಿಗೆ ಅಽಕಾರ ಕೊಡಿ ಎಂದರೆ ಕಾಂಗ್ರೆಸ್ ನವರು ಪುಡಿಗಾಸಿನ ಗ್ಯಾರಂಟಿ ನೀಡುತ್ತಾರೆ. ಆದರೆ ಮಹಿಳೆಯರನ್ನು ಸಬಲರಾಗಿಸುವ, ಈ ನಾಡನ್ನು ಅಭಿವೃದ್ಧಿ ಪಥದಲ್ಲ ಕೊಂಡೊಯ್ಯಲು ಅವರ ಕೈಗೆ ಅಧಿಕಾರ ನೀಡುವಂತಾಗಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಗುಣ,ಸುಜಾತಾ ಬಾಂದೆಕರ್, ಕಲ್ಪನಾ ನಾಯ್ಕ್, ನಯನಾ ನೀಲವರ್, ವೈಶಾಲಿ ತಾಂಡೆಲ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ನಗರ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ರವಿರಾಜ್ ಅಂಕೋಲೆಕರ ಉಪಸ್ಥಿತರಿದ್ದರು. ಮಾಲಾ ಹುಲಸ್ವಾರ,ಪ್ರಾಸ್ತಾವಿಕ ಮಾತನಾಡಿದರು ವೈಶಾಲಿ ಸ್ವಾಗತಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಹಾಗೂ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net