ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ನುಗ್ಗಿದ ಬಿಜೆಪಿ ಪ್ರಮುಖರು

ಬಿಜೆಪಿಗರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಬಿಜೆಪಿಗರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರವಾರ-ಅಂಕೋಲಾ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಒತ್ತಾಯ
ಕಾರವಾರ: ಅಂಕೋಲಾ-ಕಾರವಾರ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಬಹೆಗರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಽಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಕೆಲ ಹೊತ್ತು ಜಿಲ್ಲಾಧಿಕಾರಿ ಕಚೇರಿಯ ಗೇಟ್ ಎದುರು ಪ್ರತಿಭಟನಾ ಸಭೆ ನಡೆಸಿದರು. ಸಾಕಷ್ಟು ಸಮಯವಾದರೂ ಜಿಲ್ಲಾಧಿಕಾರಿ ಅವರಾಗಲಿ ಅಪರ ಜಿಲ್ಲಾಧಿಕಾರಿ ಅವರಾಗಲೀ ಮನವಿ ಸ್ವೀಕರಿಸಲು ಆಗಮಿಸದ ಕಾರಣ ಗೇಟ್ ದೂಡಿ ಒಳ ನಡೆದರು. ಡಿಸಿ ಕಚೇರಿಯ ಕೌಪೌಂಡ್‌ನಲ್ಲಿಯೇ ಧರಣಿ ಕುಳಿತರು. 
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಬಿಜೆಪಿ ಪ್ರಮುಖರ ನಡುವೆ ಮಾತಿನ ಚಕಮಕಿ, ನೂಕುನುಗ್ಗಲು ನಡೆಯಿತು. ಅಪರ ಜಿಲ್ಲಾಽಕಾರಿ ಸಾಜಿದ್ ಮುಲ್ಲಾ ಆಗಮಿಸಿ ಮನವಿ ಸ್ವೀಕರಿಸಿದ ನಂತರ ಪ್ರತಿಭಟನಾಕಾರರು ಶಾಂತರಾದರು. 
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಕ್ಷೇತ್ರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ವಾರಗಟ್ಟಲೆ ವಿದ್ಯುತ್ ಇಲ್ಲದ ಪರಿಸ್ಥಿತಿ ಉಂಟಾಗುತ್ತಿವೆ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿವೆ. ಅವುಗಳನ್ನು ದುರಸ್ತಿ ಮಾಡುವವರಿಲ್ಲ. ಕಾರವಾರ ಕ್ರಿಮ್ಸ್ನ್ನು ಸೂಪರ್ ಸ್ಪೆಷಾಲಿಟಿ ಎಂದು ಘೋಷಿಸಲಾಗುತ್ತಿದೆ. ಆದರೆ, ಅಲ್ಲಿ ತಜ್ಞ ವೈದ್ಯರೇ ಇಲ್ಲ. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. 
ಪ್ರಮುಖರಾದ ಸುನೀಲ ನಾಯ್ಕ ಸೋನಿ, ಸಂಜಯ ಸಾಳುಂಕೆ, ರವಿರಾಜ ಅಂಕೋಲೆಕರ್, ರಾಜೇಂದ್ರ ನಾಯ್ಕ, ಮಾಲಾ ಹುಲಸ್ವಾರ್, ಶಿಲ್ಪಾ ನಾಯ್ಕ, ಸುಭಾಷ ಗುನಗಿ ಇತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net