ಜಿಲ್ಲೆಗೆ ಇಂದು ಬಿಜೆಪಿ ನಾಯಕರ ದಂಡು

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಡಗಾಂವಕ್ಕೆ ಬಂದು ಇಳಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಡಗಾಂವಕ್ಕೆ ಬಂದು ಇಳಿದರು.
Published on
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಎರಡನೇ ಪುತ್ರಿ ರಾಜಲಕ್ಷ್ಮೀ ಅವರ ವಿವಾಹ ಸತ್ಕಾರ ಸಮಾರಂಭವು ಶಿರಸಿಯ ಗೋಳಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಡಿ.6 ರಂದು ನೆರವೇರಲಿದೆ. ಅದಕ್ಕೆ ಕೇಂದ್ರ ಮಂತ್ರಿಗಳು ರಾಜ್ಯದ ವಿವಿಧ ಬಿಜೆಪಿ ಧುರೀಣರು ಪಾಲ್ಗೊಳ್ಳುವರು.
ರಾಜಲಕ್ಷ್ಮಿ ಅವರ ವಿವಾಹವು ಗೋಳಿ ದೇವಸ್ಥಾನದಲ್ಲಿ ನವೆಂಬರ್ 30 ರಂದು ನೆರವೇರಿದೆ.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಈಗಾಗಲೇ ಶಿರಸಿಗೆ ಆಗಮಿಸಿದ್ದಾರೆ. ಶನಿವಾರ ಮಾರಿಕಾಂಬಾ ದೇವಸ್ಥಾನ, ಸ್ವರ್ಣವಲ್ಲೀ ಮಠ, ಹಾಗೂ ಕಾರವಾರಕ್ಕೆ ಭೇಟಿ ನೀಡುವರು. ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಡಿ.6 ರಂದು ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಶಿರಸಿಗೆ ಆಗಮಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಾಯಂಕಾಲ ಕಾಗೇರಿ ಅವರ ಮನೆಗೆ ಭೇಟಿ ನೀಡುವರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಮುಖಂಡ ಸಿ.ಟಿ.ರವಿ, ಸಂಸದ ಯತ್ನಾಳ್ ಹೀಗೆ ಹಲವು ಗಣ್ಯರು ಪಾಲ್ಗೊಳ್ಳುವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net