ಡ್ರೈನೇಜ್ ಹೊಂಡಕ್ಕೆ Drainage pit ಬಿದ್ದ ಬೈಕ್ ‘ಸವಾರನಿಗೆ ಗಾಯ’

ಡ್ರೈನೇಜ್ ಹೊಂಡಕ್ಕೆ Drainage pit ಬಿದ್ದ ಬೈಕ್.
ಡ್ರೈನೇಜ್ ಹೊಂಡಕ್ಕೆ Drainage pit ಬಿದ್ದ ಬೈಕ್.
Published on
ದಾಂಡೇಲಿ: ಸವಾರನ ನಿಯಂತ್ರಣ ತಪ್ಪಿ ಬೈಕ್‌ವೊಂದು ಡ್ರೈನೇಜ್ ಹೊಂಡಕ್ಕೆ Drainage pit ಬಿದ್ದ ಘಟನೆ ನಗರದ ಜೆ.ಎನ್. ರಸ್ತೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ವೇಗವಾಗಿ ಚಲಾಯಿಸುತ್ತಿದ್ದ ಸವಾರನ ನಿಯಂತ್ರಣ ತಪ್ಪಿ ಜೆ.ಎನ್. ರಸ್ತೆಯಲ್ಲಿ ದುರಸ್ತಿ ಕಾರ್ಯಕ್ಕಾಗಿ ತೆರೆದಿಟ್ಟಿದ್ದ ಡ್ರೈನೇಜ್ ಹೊಂಡಕ್ಕೆ ಬಿದ್ದು ಸವಾರನಿಗೆ ಗಾಯವಾಗಿದೆ.
ಮಳೆ ನೀರು ಹಾಗೂ ಇನ್ನಿತರ ತ್ಯಾಜ್ಯ ಸರಾಗವಾಗಿ ಹರಿಯಲೆಂದು ಇದ್ದಿರುವ ಡ್ರೈನೇಜ್ ದುರಸ್ತಿ ಮಾಡುವ ಸಲುವಾಗಿ ತೆರೆದಿಡಲಾಗಿತ್ತು. ಅದರ ಸುತ್ತಲೂ ಕಲ್ಲುಗಳು ಹಾಗೂ ಸಿಮೆಂಟ್ ಹಲಗೆಗಳನ್ನು ಇಡಲಾಗಿತ್ತು. ಆದರೆ ಸವಾರನ ನಿಯಂತ್ರಣ ತಪ್ಪಿದ್ದರಿಂದ ಬೈಕ್ ಹೊಂಡಕ್ಕೆ ಬಿದ್ದಿದೆ.
ನಗರಸಭೆ ನಿರ್ಲಕ್ಷೃ: ಕಳೆದ ಐದಾರು ತಿಂಗಳಿನಿಂದ ಈ ಹೊಂಡವನ್ನು ತೆರೆದಿಡಲಾಗಿದ್ದು, ದುರಸ್ತಿ ಕಾರ್ಯ ಮಾತ್ರ ಈವರೆಗೂ ನಡೆದಿಲ್ಲ. ಇದು ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿದ್ದು, ನಗರಸಭೆಯವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಮುಂದಾಗಬಹುದಾದ ಅನಾಹುತ ತಪ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net