ದಾಂಡೇಲಿ: ಎಮ್ಮೆ ಅಡ್ಡ ಬಂದು ದ್ವಿಚಕ್ರ ವಾಹನ ಚಾಲಕ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಅಂಬಿಕಾನಗರದ ಅಂಚೆ ಇಲಾಖೆಯ ಉದ್ಯೋಗಿ ಹಾಗೂ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ನಿವಾಸಿ ಉಮೇಶ ಭಟ್(59) ಮೃತರು. ಅಂಬಿಕಾನಗರದಿAದ ಕರ್ತವ್ಯ ಮುಗಿಸಿ ತಮ್ಮ ಜನತಾ ಕಾಲನಿಯ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಕುಳಗಿ ಕನ್ನಡ ಶಾಲೆಯ ಹತ್ತಿರ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ರವಾನಿಸಲಾಗಿತ್ತು.