- ಕಾಳಿ, ಗಂಗಾವಳಿಗೆ ಸಣ್ಣ ಅಣೆಕಟ್ಟೆ ಕಟ್ಟಲು ಒತ್ತಾಯ
- ಜಿಲ್ಲಾ ಆಸ್ಪತ್ರೆ ಕಾರವಾರದಿಂದ ಕೊಂಡೊಯ್ಯಲು ವಿರೋಧ
ಕಾರವಾರ: ಕಾಳಿ ನದಿಯ ನೀರನ್ನು ಮಲಪ್ರಭಾಗೆ ಪಂಪ್ ಮಾಡುವುದಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾಗಿ ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ನದಿ ಜೋಡಣೆಯ ವಿಚಾರವನ್ನು ಸಿಎಂ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದರು. ಅದರಲ್ಲಿ ಕಾಳಿ ನದಿ ನೀರಿನ ತಿರುವಿನ ವಿಚಾರವೂ ಇತ್ತು. ಆದರೆ, ಆಕ್ಷೇಪಿಸಿ, ಕೈಗಾ ಅಣು ವಿದ್ಯುತ್ ಉತ್ಪಾದನೆಗಾಗಿ ಕದ್ರಾ ಅಣೆಕಟ್ಟೆಯಲ್ಲಿ ಕನಿಷ್ಠ 29 ಮೀಟರ್ ನೀರನ್ನು ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಈ ಸಂಬAಧ ಕೇಂದ್ರ ಹಾಗೂ ರಾಜ್ಯದ ನಡುವೆ ಮೊದಲೇ ಎಂಒಯು ಏರ್ಪಟ್ಟಿದೆ. ಹಾಗಾಗಿ ಯಾವುದೇ ಕಾರಣಕ್ಕೂ ನೀರನ್ನು ಬೇರೆ ನದಿಗಳಿಗೆ ಕೊಂಡೊಯ್ಯಬಾರದು ಎಂದು ಹೇಳಿದ್ದೇನೆ ಎಂದಿದ್ದಾರೆ.
ಕಾಳಿ ನದಿಗೆ, ಗಂಗಾವಳಿ ನದಿಗೆ ಅಲ್ಲಲ್ಲಿ ಕಿರು ಆಣೆಕಟ್ಟುಗಳನ್ನು ನಿರ್ಮಿಸಿದರೆ, ನಮ್ಮ ಭಾಗದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಆಗುತ್ತದೆ. ಬಾವಿಗಳಲ್ಲಿ ನೀರು ನಿಂತು ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಈ ದಿಶೆಯಲ್ಲಿ ರಾಜ್ಯ ಸರಕಾರ ಪ್ರಯತ್ನಿಸಿದರೆ, ನಮ್ಮ ಭಾಗದಲ್ಲಿ ಕೃಷಿ ಚಟುವಟಿಕೆಗೂ ಅನುಕೂಲವಾಗಲಿದೆ ಎಂದು ಮಂಡಿಸಿದರು. ನಮ್ಮ ಭಾಗದ ಎಲ್ಲ ಜಲಾಶಯಗಳ ಹೂಳು ತೆಗೆಯುವ ಮೂಲಕ ಹೆಚ್ಚಿನ ಜಲ ಸಂಪನ್ಮೂಲದ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದೇನೆ.
ಆಸ್ಪತ್ರೆ ಕೊಂಡೊಯ್ಯಲು ವಿರೋಧ:
ಮತ್ತು ಜಿಲ್ಲಾ ಆಸ್ಪತ್ರೆಯನ್ನು ಕುಮಟಾಕ್ಕೆ ಸ್ಥಳಾಂತರಿಸುವAತೆ ಸಭೆಯಲ್ಲಿ ಕುಮಟಾದ ಶಾಸಕ ದಿನಕರ ಶೆಟ್ಟಿ ಅವರು ಪ್ರಸ್ತಾವಿಸಿದಾಗ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಕುಮಟಾಕ್ಕೆ ಬೇಕಿದ್ದರೆ, ಪ್ರತ್ಯೇಕ ಆಸ್ಪತ್ರೆ ಕೇಳಿ. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಬಡವರಿಗೆ ಜಿಲ್ಲಾಸ್ಪತ್ರೆಯ ಅವಶ್ಯಕತೆ ಇದೆ. ಬಡ ಜನರಿಗೆ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರಕುತ್ತಿಲ್ಲ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯನ್ನು ಬಿಟ್ಟುಕೊಡಲಾಗದು ಎಂದು ಹೇಳಿದ್ದೇನೆ ಎಂದಿದ್ದಾರೆ.:
ಅರಣ್ಯದಲ್ಲಿ ಕಾಮಗಾರಿಗೆ ಸುತ್ತೋಲೆ:
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ಅರಣ್ಯ ಭೂಮಿಯಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆಗೆ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಲಾಯಿತು. ಕುಡಿಯುವ ನೀರಿನ ವಿಷಯದಲ್ಲಿ ಅರಣ್ಯ ಇಲಾಖೆಯವರು ಕಾಮಗಾರಿ ಗಳಿಗೆ ಅಡ್ಡಪಡಿಸದೇ ಸಹಕರಿಸಬೇಕಾದ ಅವಶ್ಯಕತೆ ಇದೆ ಎಂದು ಸಭೆಯಲ್ಲಿ ಗಮನ ಸೆಳೆಯಲಾಯಿತು. ಅದಕ್ಕೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು ಮಾತನಾಡಿ, ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಮತ್ತು ಈ ಕುರಿತು ಸುತ್ತೋಲೆ ಹೊರಡಿಸಲಾಗುವುದು ಎನ್ನುವ ಭರವಸೆಯನ್ನು ನೀಡಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.