ಬೇಡ್ತಿ-ವರದಾ ನದಿ ಜೋಡಣೆ ಸ್ಥಳ ಪರಿಶೀಲನೆ ಆರಂಭ

ಎನ್‌ಡಬ್ಲುಡಿಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಎನ್‌ಡಬ್ಲುಡಿಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
Published on
ಕಾರವಾರ: ವಿವಾದಿತ ಬೇಡ್ತಿ-ವರದಾ(ಹಿರೇವಡ್ಡತ್ತಿ) ನದಿ ಜೋಡಣೆ ಯೋಜನೆ ರೂಪಿಸುವ ಸಂಬಂಧ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲುಡಿಎ) ಹಾಗೂ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಕೆಇಆರ್‌ಎಸ್)ದ ಅಧಿಕಾರಿಗಳ ತಂಡವು ಜಂಟಿಯಾಗಿ ಶಿರಸಿ ಹಾಗೂ ಯಲ್ಲಾಪುರ ಭಾಗದಲ್ಲಿ ಸಮೀಕ್ಷೆ ಆರಂಭಿಸಿದೆ.
ತಂಡವು ಬೇಡ್ತಿ ನದಿಯಿಂದ ಯಲ್ಲಾಪುರಕ್ಕೆ ನೀರೊದಗಿಸಲು ಮಾಡಿದ್ದ ಪಂಪ್ ಹೌಸ್, ಬ್ಯಾರೇಜ್ ಮುಂತಾದ ಸ್ಥಳಗಳನ್ನು ಮಂಗಳವಾರ ಪರಿಶೀಲನೆ ನಡೆಸಿತ್ತು. ಬುಧವಾರ ಇನ್ನೂ ಹಲವು ಕಡೆಗಳಲ್ಲಿ ಟೊಪೊಗ್ರಾಫಿಕಲ್ ಸರ್ವೇ ನಡೆಸಿರುವುದಾಗಿ ಎನ್‌ಡಬ್ಲುಡಿಎ ಅಧಿಕೃತವಾಗಿ ಪ್ರಕಟಿಸಿದೆ.

ಏನೇನು ಸರ್ವೇ..?

ನದಿ ಜೋಡಣೆ ಸಂಬಂಧ ಎನ್‌ಡಬ್ಲುಡಿಎ ಈ ಹಿಂದೆ ರಚಿಸಿದ ಡಿಪಿಆರ್‌ನಲ್ಲಿ ಇದ್ದ ಅಂಶಗಳನ್ನು ಆಧರಿಸಿ ಅಧಿಕಾರಿಗಳ ತಂಡ ಸ್ಥಳ ಭೇಟಿ ನಡೆಸಿದೆ. ಸಮುದ್ರಕ್ಕೆ ಹರಿದು ಹೋಗುವ ನೀರಿನಲ್ಲಿ ಶೇ.8 ರಿಂದ 10 ರಷ್ಟು ನೀರನ್ನು ಮಾತ್ರ ಬಳಸಿಕೊಂಡು, ಅರಣ್ಯ ಪ್ರದೇಶಕ್ಕೆ ಅತಿ ಕಡಿಮೆ ಹಾನಿಯಾಗುವಂತೆ ಅಲ್ಪ ಭಾಗ ಮಾತ್ರ ಕಾಲುವೆಗಳನ್ನು ನಿರ್ಮಿಸಿ, ಪೈಪ್‌ಲೈನ್ ಹಾಗೂ ಟನಲ್ ಮೂಲಕ ನೀರನ್ನು ಹೇಗೆ ಸಾಗಿಸಬಹುದು ಎಂಬ ಬಗ್ಗೆ ತಂಡ ಪರಿಶೀಲನೆ ನಡೆಸಿರುವುದಾಗಿ ಅಽಕಾರಿಯೊಬ್ಬರು `ವಿಜಯವಾಣಿ'ಗೆ ಮಾಹಿತಿ ನೀಡಿದರು.
ಇದಲ್ಲದೇ,ಅಽಕಾರಿಗಳು ಇನ್ನು ಇಲ್ಲಿ ಮಣ್ಣು ಪರೀಕ್ಷೆ, ಅರಣ್ಯ ಹಾಗೂ ವನ್ಯಜೀವಿಗಳಿಗೆ ಹಾನಿ ಉಂಟು ಮಾಡುವ ವಿಚಾರಗಳ ಬಗ್ಗೆ ಸಮೀಕ್ಷೆ ನಡೆಸಬೇಕಿದೆ. ನಂತರ ಸಮಿತಿಯ ವರದಿಯನ್ನು ಆಧರಿಸಿ, ಪರಿಷ್ಕೃತ ಡಿಪಿಆರ್ ತಯಾರಿಸಲಾಗುತ್ತದೆ. ಡಿಪಿಆರ್ ಆಧರಿಸಿ ಕೇಂದ್ರ ಪರಿಸರ ಮಂತ್ರಾಲಯಕ್ಕೆ ಪರಿಸರ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಆ ನಂತರ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಽಕಾರಿಯೊಬ್ಬರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಜನಪ್ರತಿನಿಧಿಗಳ ನಿಯೋಗವು ಪಕ್ಷಾತೀತವಾಗಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಸರ್ವೇಗೂ ಅವಕಾಶ ನೀಡುವುದಿಲ್ಲ ಎಂದು ಬೇಡ್ತಿ ಹಾಗೂ ಉಪ ನದಿಗಳ ತೀರದ ನಿವಾಸಿಗಳು ಹೇಳುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿ ಜನರನ್ನು ಸಂಘಟಿಸುವ ಕಾರ್ಯ ನಡೆದಿದೆ. ಆದರೆ, ಎಲ್ಲರ ಕಣ್ಣು ತಪ್ಪಿಸಿ, ಅಽಕಾರಿಗಳು ಬಂದು ಸರ್ವೇ ಕಾರ್ಯ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
"

ಬೇಡ್ತಿ, ಅಘನಾಶಿನಿ ಅಥವಾ ಯಾವುದೇ ನದಿ ತಿರುವು ಯೋಜನೆಗೆ ನಮ್ಮ ತೀವ್ರ ವಿರೋಧವಿದೆ. ಸರ್ವೇ ನಡೆಸುವುದಕ್ಕೂ ನಮ್ಮ ವಿರೋಧವಿದ್ದು, ಅದನ್ನು ನಾವು ಅಹಿಂಸಾತ್ಮಕವಾಗಿ ತಡೆಯುತ್ತೇವೆ. ಅಽಕಾರಿಗಳ ತಂಡ ತಕ್ಷಣ ವಾಪಸ್ ಹೋಗಬೇಕು. ಹೆಚ್ಚಿನ ಸಮೀಕ್ಷೆಗೆ ನಾವು ಅವಕಾಶ ನೀಡುವುದಿಲ್ಲ.

ಅನಂತ ಅಶೀಸರ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ .



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net