ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆದರೆ, ಈ ಯಾವ ಯೋಜನೆಗಳೂ ನಮ್ಮ ಅವಧಿಯಲ್ಲಿ ಘೋಷಣೆಯಾಗಿದ್ದಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಘೋಷಣೆ ಆಗಿರುವುದಾಗಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿದ್ದರು. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಐವರು ಶಾಸಕರಿದ್ದರು. ಆಗ ಈ ಯಾವುದೇ ಯೋಜನೆಗಳ ಬಗ್ಗೆ ಅರ‍್ಯಾರೂ ಚಕಾರ ಎತ್ತಿರಲಿಲ್ಲ ಇದನ್ನು ನಾನು ದಾಖಲೆಗಳ ಸಮೇತ ಬಿಡುಗಡೆ ಮಾಡಿ ಹೇಳಿದ್ದೇನೆ ಎಂದರು.