ಅಲೆದಾಟ ತಪ್ಪಿಸಲಿದೆ ಆಯುಷ್ಮಾನ್ ಕೇಂದ್ರ (Ayushman Health Center)

ಗೋಕರ್ಣ ಬಳಿಯ ಹಿತ್ತಲಮಕ್ಕಿಯಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ (Ayushman Health Center) ಶಾಸಕ ದಿನಕರ ಶೆಟ್ಟಿ ಶುಕ್ರವಾರ ಭೂಮಿಪೂಜೆ ಕೈಗೊಂಡರು. ಡಾ.ಆಜ್ಞಾ ನಾಯಕ, ಆನಂದ ಕವರಿ, ಪ್ರದೀಪ ನಾಯಕ, ಮಹೇಶ ಶೆಟ್ಟಿ, ಬೊಮ್ಮಯ್ಯ ಗಾಂವಕರ, ಗಣಪತಿ ಪಟಗಾರ ಇತರರಿದ್ದರು.
ಗೋಕರ್ಣ ಬಳಿಯ ಹಿತ್ತಲಮಕ್ಕಿಯಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ (Ayushman Health Center) ಶಾಸಕ ದಿನಕರ ಶೆಟ್ಟಿ ಶುಕ್ರವಾರ ಭೂಮಿಪೂಜೆ ಕೈಗೊಂಡರು. ಡಾ.ಆಜ್ಞಾ ನಾಯಕ, ಆನಂದ ಕವರಿ, ಪ್ರದೀಪ ನಾಯಕ, ಮಹೇಶ ಶೆಟ್ಟಿ, ಬೊಮ್ಮಯ್ಯ ಗಾಂವಕರ, ಗಣಪತಿ ಪಟಗಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿಪೂಜೆ ನೆರವೇರಿಸಿದ ಶಾಸಕ ದಿನಕರ ಶೆಟ್ಟಿ ಅಭಿಮತ
  • ಹಿತ್ತಲಮಕ್ಕಿಯಲ್ಲಿ 65 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ
  • ಸ್ಥಳದಲ್ಲಿಯೇ ಆರೋಗ್ಯ ಸೇವೆ ಲಭ್ಯ
ಗೋಕರ್ಣ: ಹಿತ್ತಲಮಕ್ಕಿಯಲ್ಲಿ 65 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ (Ayushman Health Center) ನಿರ್ಮಾಣದಿಂದ ತೊರ್ಕೆ ಗ್ರಾಪಂ ವ್ಯಾಪ್ತಿಯ ಗ್ರಾಮಾಂತರಗಳ ಜನರಿಗೆ ಸ್ಥಳದಲ್ಲಿಯೇ ಆರೋಗ್ಯ ಸೇವೆ ಲಭ್ಯವಾಗಲಿದೆ. ಈ ಕೇಂದ್ರ ಕಾರ್ಯಾರಂಭದಿಂದ ಗ್ರಾಮಸ್ಥರು ಬೇರೆಡೆ ಅಲೆಯುವುದು ತಪ್ಪಲಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಹತ್ತಿರದ ಹಿತ್ತಲಮಕ್ಕಿಯಲ್ಲಿ ಶುಕ್ರವಾರ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆ ಮಾಹಿತಿಯಂತೆ ಎರಡು ಅಂತಸ್ತಿನಲ್ಲಿ ನಿರ್ಮಾಣವಾಗುವ ಈ ಕಟ್ಟಡದ ಮೇಲಂತಸ್ತಿನಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಿಂದ ರೋಗಿಗಳ ತಪಾಸಣೆ, ಚಿಕಿತ್ಸೆ ಇತ್ಯಾದಿ ವ್ಯವಸ್ಥೆ ಇರಲಿದೆ. ತಳಭಾಗದಲ್ಲಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರ ಸೇವೆ ಮೂಲಕ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ. ಈ ಕೇಂದ್ರ ಸಾರ್ವಜನಿಕರಿಗೆ ಲಸಿಕೆ ವಿತರಣೆ ಮತ್ತು ವಿವಿಧ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಕೂಡ ಉಪಯೋಗವಾಗಲಿದೆ ಎಂದು ವಿವರಿಸಿದರು.
ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಸ್ಥಳದಾನಿಗಳ ಪುತ್ರರಾದ ನಿವೃತ್ತ ಉಪನ್ಯಾಸಕ ಬೊಮ್ಮಯ್ಯ ಗಾಂವಕರ, ಪ್ರದೀಪ ನಾಯಕ, ಮಹೇಶ ಶೆಟ್ಟಿ, ಗುತ್ತಿಗೆದಾರ ಗಣಪತಿ ಪಟಗಾರ, ರಾಮು ಕೆಂಚನ್, ವಿ.ಆರ್. ಕವರಿ, ಮಹೇಶ ನಾಯಕ, ಸಂದೀಪ ಅಗಸಾಲಿ, ರಾಜು ಗಾಂವಕರ, ಪ್ರಭಾಕರ ಪ್ರಸಾದ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net