ಐದು ತಿಂಗಳ ಹಿಂದೆ ಪತ್ನಿ ಸಾವು: ಡಾ.ರಮೇಶ ಅವರ ಪತ್ನಿ ಐದು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಾಲೂಕಿನ ಮಂಜಗುಣಿಯಲ್ಲಿ ವೈದ್ಯರು ಪತ್ನಿಯ ತಂಗಿಯ ಜೊತೆಯಲ್ಲಿಯೇ ಸೋಮವಾರ ಮದುವೆ ಆಗುವವರಿದ್ದರು. ಅದಕಾರಣ ಕುಟುಂಬದವರು ಭಾನುವಾರ ಡಾ.ರಮೇಶ ಮನೆಗೆ ಭೇಟಿ ನೀಡಿದ್ದರು. ಘಟನೆ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ ತಕ್ಷಣ ಶ್ವಾನ ದಳದೊಂದಿಗೆ ಡಿಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮ, ಮಾರುಕಟ್ಟೆ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.