

ಪ್ರಮುಖ ಮುಖ್ಯಾಂಶಗಳು
ಅಘನಾಶಿನಿ ನದಿ ಜೀವ ವೈವಿಧ್ಯತೆಯ ಆಗರ. ಇಲ್ಲಿಯ ಅಪ್ಪೆಮಿಡಿ ಮಾವಿನಕಾಯಿಗಳು ವಿಶೇಷ ಪರಿಮಳ, ವಿಭಿನ್ನತೆ ಹೊಂದಿದೆ. ನಮ್ಮ ನದಿ ಅಂಚಿನ ತಳಿಗಳ ದಾಖಲೀಕರಣ ಉದ್ದೇಶದೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.
ಅಘನಾಶಿನಿಯ ಅಪ್ಪೆಮಿಡಿಗಳ ಸಂರಕ್ಷಣೆಗೆ 2002ರ ಜೀವ ವೈವಿಧ್ಯತಾ ಕಾನೂನಿನಡಿಯಲ್ಲಿ ಅವಕಾಶವಿದೆ. ಸರಕುಳಿಯಿಂದ ಉಂಚಳ್ಳಿ ಜಲಪಾತದವರೆಗೆ ಅಪ್ಪೆ ಮರಗಳ ಜತೆಗೆ ಇಲ್ಲಿ ಜೀವ ವೈವಿಧ್ಯತೆಯ ವಿಶೇಷತೆಗಳನ್ನೂ ದಾಖಲಿಸುತ್ತಿದ್ದೇವೆ.