Alemane festival ಆಕರ್ಷಣೆ ಕೇಂದ್ರ ಆಲೆಮನೆ ಹಬ್ಬ

ಶಿರಸಿಯ ರೋಟರಿ ಸಂಸ್ಥೆ ಆಯೋಜಿಸಿದ್ದ ಆಲೆಮನೆ Alemane festival ಹಬ್ಬಕ್ಕೆ ಗಿರೀಶ ಮಾಸೂರ್ಕರ್ ಚಾಲನೆ ನೀಡಿದರು.
ಶಿರಸಿಯ ರೋಟರಿ ಸಂಸ್ಥೆ ಆಯೋಜಿಸಿದ್ದ ಆಲೆಮನೆ Alemane festival ಹಬ್ಬಕ್ಕೆ ಗಿರೀಶ ಮಾಸೂರ್ಕರ್ ಚಾಲನೆ ನೀಡಿದರು.
Published on
ಶಿರಸಿ: ನಗರದ ವಿಕಾಸಾಶ್ರಮ ಮೈದಾನದಲ್ಲಿ ರೋಟರಿ ಸಂಸ್ಥೆ ಆಯೋಜಿಸಿರುವ ಆಲೆಮನೆ ಹಬ್ಬ Alemane festival ಈಗ ನಗರವಾಸಿಗಳ ಆಕರ್ಷಣೆಯ ಕೇಂದ್ರವಾಗಿದೆ.
ಇಲ್ಲಿಯ ವಿಶೇಷ ಪ್ರದರ್ಶನಗಳು, ವಿವಿಧ ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ನಗರವಾಸಿಗಳು ಕುಟುಂಬ ಸಮೇತವಾಗಿ ತೆರಳುತ್ತಿದ್ದಾರೆ.
ರೋಟರಿ ಸಂಸ್ಥೆ ವಿವಿಧ ಜನೋಪಯೋಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಯೋಜನೆಗೆ ರೋಟರಿ ಸಂಸ್ಥೆ ಹಣಕಾಸಿನ ನೆರವು ನೀಡುತ್ತದೆಯಾದರೂ ಅಲ್ಪ ಪ್ರಮಾಣದ ಆರಂಭಿಕ ಹಣವನ್ನು ಸ್ಥಳೀಯ ರೋಟರಿ ಸಂಸ್ಥೆಗಳು ಭರಿಸಬೇಕಾಗುತ್ತದೆ.
ಈ ಉದ್ದೇಶದೊಂದಿಗೆ ನಾಲ್ಕು ದಿನಗಳ ಕಾಲ ನಗರದಲ್ಲಿ ಆಲೆಮನೆ ಹಬ್ಬವನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನವಾದ ಗುರುವಾರ ಸಂಜೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತಗೊಂಡಿದೆ.
ಆಲೆಮನೆ ಹಬ್ಬ ಉದ್ಘಾಟಿಸಿ ಮಾತನಾಡಿದ ರೋಟರಿ ಮಾಜಿ ಗವರ್ನರ್ ಗಿರೀಶ್ ಮಾಸೂರ್ಕರ್, ನಿಸ್ವಾರ್ಥ ಭಾವನೆಯಿಂದ ನಮ್ಮ ಕ್ಲಬ್ ಕೆಲಸ ಮಾಡುತ್ತ ಬಂದಿದೆ. ಸಾಮಾಜಿಕ ಜವಾಬ್ದಾರಿಯೊಂದಿಗೆ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ರೋಟರಿ ಕ್ಲಬ್ ಜನಮಾನಸದಲ್ಲಿ ನೆಲೆ ನಿಲ್ಲುವ ಪ್ರಯತ್ನ ಮಾಡುತ್ತಿದೆ ಎಂದರು.
ತಹಸೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ, ಮಲೆನಾಡಿನ ಜನ ಯಾವಾಗಲೂ ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಾರೆ ಎನ್ನುವುದು ಸಂತೋಷ. ಸಮಾಜಮುಖಿ ಕಾರ್ಯವನ್ನು ಈ ರೀತಿ ಮಾಡಿ ಅದರ ಉಪಯೋಗ ಎಲ್ಲರಿಗೂ ಆಗಲಿ ಎನ್ನುವ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ಕಾರ್ಯ ಚಟುವಟಿಕೆಗಳು ಹೀಗೆಯೇ ಮುಂದುವರೆಯಲಿ, ಜನರಿಗೆ ಇದರ ಸದುಪಯೋಗವಾಗಲಿ ಎಂದರು.
ಉದ್ಯಮಿ ಆನಂದ್ ಸಾಲೇರ್ ಮಾತನಾಡಿ, ಆಲೆಮನೆ ಉತ್ಸವದ ಮೂಲಕ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ರೋಟರಿ ಕ್ಲಬ್ ಮಾಡುತ್ತಿದೆ. ಕುಡಿಯುವ ನೀರು, ಹಿರಿಯರಿಗೆ ವ್ಯಾಯಾಮದ ವ್ಯವಸ್ಥೆ, ಬಸ್ ತಂಗುದಾಣ, ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದರು.
ಡಾ.ದಿನೇಶ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಭಟ್ ಸ್ವಾಗತ ಗೀತೆ ಹಾಡಿದರು. ರೋಟರಿ ಅಧ್ಯಕ್ಷ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ರವಿ ಗಡಿಹಳ್ಳಿ ನಿರೂಪಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಪರಿಸರ ಇಂಜಿನಿಯರ್ ಶಿವರಾಜ್ ಕೆ., ಉದ್ಯಮಿ ಅಶ್ವಿನ್ ಭೀಮಣ್ಣ, ಉಪಸ್ಥಿತರಿದ್ದರು.
23 ವಿವಿಧ ದೇಶಗಳ ತಳಿಗಳ ಶ್ವಾನಗಳು ಪ್ರದರ್ಶಿತಗೊಂಡವು. ನಂತರ ಕೈಗಾದ ಸಿ.ಐ.ಎಸ್.ಎಫ್ ಪಡೆಯ ಶ್ವಾನಗಳು ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net