ಶಿರೂರು ಶ್ರೀಗಳಿಂದ ಆತ್ಮಲಿಂಗ ಪೂಜೆ

ಗೋಕರ್ಣದ ಶ್ರೀ ಮಹಾಬಲೇಶ್ವರ ಆತ್ಮಲಿಂಗಕ್ಕೆ ಉಡುಪಿ ಶ್ರೀ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದ ಸ್ವಾಮೀಜಿ ಶನಿವಾರ ಸಂಜೆ ವಿಶೇಷ ಪೂಜೆ ಕೈಗೊಂಡರು.
ಗೋಕರ್ಣದ ಶ್ರೀ ಮಹಾಬಲೇಶ್ವರ ಆತ್ಮಲಿಂಗಕ್ಕೆ ಉಡುಪಿ ಶ್ರೀ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದ ಸ್ವಾಮೀಜಿ ಶನಿವಾರ ಸಂಜೆ ವಿಶೇಷ ಪೂಜೆ ಕೈಗೊಂಡರು.
Published on
ಗೋಕರ್ಣ: ಉಡುಪಿಯ ಶ್ರೀ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದ ಸ್ವಾಮೀಜಿ ಶನಿವಾರ ಸಂಜೆ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮಂದಿರದ ಸಮಿತಿ ವತಿಯಿಂದ ಪೂರ್ಣಫಲ ಸಮರ್ಪಿಸಿ ಗೌರವಿಸಲಾಯಿತು. ಸಮಿತಿ ಸದಸ್ಯ ವೇ.ಸುಬ್ರಹ್ಮಣ್ಯ ಅಡಿ ಮತ್ತು ಉಪಾಧಿವಂತ ವೈದಿಕರು ಪೂಜೆ ನಿರ್ವಹಿಸಿದರು. ಶ್ರೀಗಳಿಂದ ಆತ್ಮಲಿಂಗಕ್ಕೆ ಮಹಾಮಂಗಳಾರತಿ ನೆರವೇರಿತು. ಪ್ರಥಮವಾಗಿ ಶ್ರೀ ಮಹಾಗಣಪತಿಯನ್ನು ಅರ್ಚಿಸಿದ ಶ್ರೀಗಳು ತರುವಾಯ ಶ್ರೀ ಪಾರ್ವತಿ ಮಂದಿರದಲ್ಲಿ ಕುಂಕುಮಾರ್ಚನೆ ಸಲ್ಲಿಸಿ ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net