ಕೊಲೆ ಪ್ರಕರಣವಾಗಿ ಬದಲಾದ ಅಪಘಾತ ಪ್ರಕರಣ

ಸುಟ್ಟು ಹೋದ ಕಾರು
ಸುಟ್ಟು ಹೋದ ಕಾರು
Published on
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಕಾರು ಸುಟ್ಟು ಹೋದ ಪ್ರಕರಣಕ್ಕೆ ಹೊಸ ತಿರುವುದು ದೊರಕಿದೆ. ಅಪಘಾತದಿಂದ ಕಾರು ಸುಟ್ಟಿದ್ದಲ್ಲ ಅದು, ಕೊಲೆಯಾಗಿರಬಹುದು ಎಂದು ಮೃತನ ತಂದೆ ದೂರು ನೀಡಿದ್ದು, ಎಫ್‌ಐಆರ್‌ನಲ್ಲಿ ಕೊಲೆ ಪ್ರಕರಣದ ಬಿಎನ್‌ಎಸ್ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಏಪ್ರಿಲ್ 8 ರಂದು ಬೆಳಗ್ಗೆ 8 ರಿಂದ 7 ಗಂಟೆಯ ನಡುವಿನ ಅವಽಯಲ್ಲಿ ತಾಳೆ ಕುಂಬ್ರಿ ಬಸ್ ಸ್ಟಾಪ್ ಎದುರು ಬಿಳಿ ಬಣ್ಣದ ಕಾರು ಕೆಎ 04, ಎಂಜೆ 8986 ತಗ್ಗಿಗೆ ಬಿದ್ದು ಸುಟ್ಟು ಕರಕಲಾಗಿತ್ತು. ಅದರಲ್ಲಿದ್ದ ಒಬ್ಬ ವ್ಯಕ್ತಿ ಸಂಪೂರ್ಣ ಸುಟ್ಟು ಹೋಗಿದ್ದರು. ಯಲ್ಲಾಪುರ ಠಾಣೆ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದರು. ಒಂದು ದಿನದ ನಂತರ ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲನಿಯ ಜಗನ್ನಾಥ ರಾಹು ಧಾಪಳೆ ಅವರು ಬಂದು ಕಾರು ಗುರುತಿಸಿ ತಮ್ಮ ಮಗನೇ ಸುಟ್ಟು ಹೋಗಿರಬಹುದು ಎಂದಿದ್ದರು.
ಅವರಿಂದ ಹೇಳಿಕೆ ಪಡೆದುಕೊಂಡಿದ್ದು, ಮೃತನ ಹೆಸರು ನಿತೇಶ ಜಗನ್ನಾಥ ಧಾಪಳೆ(35) ಎಂದು ಅಂದಾಜಿಸಲಾಗಿದ್ದು, ಖಚಿತ ಮಾಡಿಕೊಳ್ಳಲು ಸುಟ್ಟು ಹೋದ ದೇಹದ ಅವಶೇಷಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ಕಳಿಸಲಾಗಿದೆ.
ಮೃತ ದೇಹ ಹಿಂದಿನ ಸೀಟಿನಲ್ಲಿತ್ತು. ಅಲ್ಲದೇ ನಿತೇಶ ತನ್ನ ಪತ್ನಿಗೆ ವಾಟ್ಸ್ ಆ್ಯಪ್ ಕರೆ ಮಾಡಿ, ತಾನು ನಯೀಮ್ ಎಂಬುವವರ ಜೊತೆ ಗೋವಾಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದ. ಇದರಿಂದ ನಯೀಮ್ ಮತ್ತು ಆತನ ಸ್ನೇಹಿತರು ಸೇರಿಕೊಂಡು ತನ್ನ ಮಗನನ್ನು ಕೊಲೆ ಮಾಡಿ, ಇಲ್ಲಿಗೆ ತಂದು ಕಮರಿಗೆ ತಂದು ದೂಡಿ, ವಾಹನವನ್ನು ಸುಟ್ಟು ಹಾಕಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಬಿಎನ್‌ಎಸ್ ಕಾಯ್ದೆಯಂತೆ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೊನ್ನಾವರ ಪ್ರಕರಣದ ನೆರಳು:

ಸಿದ್ದಾಪುರದ ಸಹೋದರರಿಬ್ಬರನ್ನು ಅದೇ ಊರಿನ ವ್ಯಕ್ತಿ ವಿಷಯ ಕುಡಿಸಿ, ಕೊಲೆ ಮಾಡಿ, ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದು ಹೊನ್ನಾವರ ಸುಳಿಮುರ್ಕಿ ಬಳಿ ತಗ್ಗಿಗೆ ದೂಡಿ ಕೊಲೆ ಮಾಡಿದ್ದ. ಮೊದಲು ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಂತರ ತನಿಖೆ ನಡೆಸಿ, ಪ್ರಕರಣವನ್ನು ಬಯಲು ಮಾಡಿದ್ದರು. ಹಲವರನ್ನು ಬಂಽಸಿ, ತನಿಖೆ ನಡೆಸುತ್ತಿದ್ದಾರೆ.
ಈಗ ಅದೇ ಮಾದರಿಯ ಮತ್ತೊಂದು ಅಪರಾಧ ಪ್ರಕರಣ ನಡೆಯಿತೇ ಎಂಬ ಅನುಮಾನ ಮೂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net