ಕಾರವಾರ: ಮೊಬೈಲ್ ಹಾಗೂ ಅದಕ್ಕೆ ಕರೆನ್ಸಿ ನೀಡದೇ ಆನ್‌ಲೈನ್ ಆ್ಯಪ್‌ಗಳಲ್ಲಿ ಕಾರ್ಯನಿರ್ವಹಿಸುವಂತೆ ಒತ್ತಡ ಹೇರುವುದನ್ನು ಖಂಡಿಸಿ ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಜಿಪಂ ಸಿಇಒ ಡಾ.ದಿಲೀಶ್ ಶಶಿ ಹಾಗೂ ಆರ್‌ಸಿಎಚ್ ಅಽಕಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರಿಗೆ ಸಮಸ್ತ ಎಂಬ ಆ್ಯಪ್‌ನಲ್ಲಿ ದಾಖಲೆಗಳನ್ನು ತುಂಬಲು ಒತ್ತಾಯಿಸಲಾಗುತ್ತಿದೆ. ಆದರೆ, ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಮೊಬೈಲ್ ನೀಡಿಲ್ಲ. ಸ್ವಂತ ಮೊಬೈಲ್ ಬಳಕೆಯಾಗಿ ಮಾಸಿಕವಾಗಿ ನೀಡುತ್ತಿದ್ದ ೨೮೦ ರೂ.ಗಳನ್ನೂ ನಿಲ್ಲಿಸಲಾಗಿದೆ. ಆದರೆ, ಆ್ಯಪ್‌ನಲ್ಲಿ ಕಾರ್ಯ ನಿರ್ವಹಿಸಲು ಒತ್ತಾಯಿಸಲಾಗುತ್ತಿದೆ ಎಂದು ದೂರಿದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಾ ಚಲವಾದಿ ಮಾತನಾಡಿ, ಹೆಚ್ಚಿ ಆಶಾ ಕಾರ್ಯಕರ್ತೆಯರು ಬಡವರಾಗಿದ್ದು, ಉತ್ತಮ ಸ್ಮಾರ್ಟ್ ಫೋನ್‌ಗಳಿಲ್ಲ. ಇದ್ದ ಫೋನ್‌ನಲ್ಲಿ ಮೆಮೊರಿ ಕಡಿಮೆಯಾಗುತ್ತಿದೆ. ಆಶಾಗಳ ವೈಯಕ್ತಿಕ ಗೌಪ್ಯತೆ ಹಾಗೂ ಫೋನ್ ಬಾಳಿಕೆಗೆ ಧಕ್ಕೆಯಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದಾಗಿ ಆರೋಗ್ಯ ಸಚಿವರು ಕಳೆದ ತಿಂಗಳು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಸಮಸ್ಯೆ ಹೇಳಿಕೊಂಡರು. ನಾವು ಆಧುನಿಕ ತಂತ್ರಜ್ಞಾನದ ವಿರೋಽಗಳಲ್ಲ ಡಿಜಿಟಲೀಕರಣ ಅನಿವಾರ್ಯ ಅಂತಾದರೆ ಮೇಲಿನ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾಗುತ್ತದೆ ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ನಿವೇದಿತಾ ಕೊಳಂಬಕರ್, ಶೋಭಾ ನಾಯ್ಕ, ಸೌಭಾಗ್ಯ ಬಂಟ್, ಶಾರದಾ, ಆಶಾ ಭಂಡಾರ್ಕರ್, ವೀಣಾ ಜಡ ರಾಮನ ಕುಂಟೆ, ಪ್ರಭಾಮಣಿ ಜೈನ ನಿವೇದಿತಾ ಕೊಳಂಬಕರ್ ಶಾರದಾ ಆಶಾ ನಾಗೇಕರ್,ಚೇತನಾ, ರೂಪಾ ನಾಯ್ಕ್ ಸೀತಾ ನಾಯ್ಕ್, ಮನ್ವಿತಾ ಪಾಗಿ, ಚೇತನ ಗುಣಗಿ ಇತರರು ಇದ್ದರು.