ಕೃತಕ ಬುದ್ಧಿಮತ್ತೆ ವಿಶೇಷ ಕಾರ್ಯಾಗಾರ

ಕಮಲಾ ಬಾಳಿಗಾ ಶಿಕ್ಷಣ ಕಾಲೇಜ್‌ನಲ್ಲಿ ಎಐ ಕುರಿತು ತಜ್ಞೆ ಸುನೀತಾ ಪಟಗಾರ ಕಾರ್ಯಾಗಾರ ನಡೆಸಿಕೊಟ್ಟರು. ಡಾ. ಪ್ರೀತಿ ಭಂಡಾರಕರ, ಡಾ.ಜಿ.ಡಿ. ಭಟ್ ಇದ್ದರು.
ಕಮಲಾ ಬಾಳಿಗಾ ಶಿಕ್ಷಣ ಕಾಲೇಜ್‌ನಲ್ಲಿ ಎಐ ಕುರಿತು ತಜ್ಞೆ ಸುನೀತಾ ಪಟಗಾರ ಕಾರ್ಯಾಗಾರ ನಡೆಸಿಕೊಟ್ಟರು. ಡಾ. ಪ್ರೀತಿ ಭಂಡಾರಕರ, ಡಾ.ಜಿ.ಡಿ. ಭಟ್ ಇದ್ದರು.
Published on
ಕುಮಟಾ: ಇಲ್ಲಿನ ಕೆನರಾ ಕಾಲೇಜು ಸೊಸೈಟಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಘಟಕದ ಅಡಿಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜನ್ಸ್) ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದರು.
ಬೆಂಗಳೂರಿನ ಶಿಕ್ಷಣ ಫೌಂಡೇಷನ್‌ನ ಕಾರವಾರ ವಿಭಾಗದ ಮುಖ್ಯ ತರಬೇತುದಾರರಾದ ಸೀನಿಯರ ಸಾಫ್ಟ್‌ವೇರ್ ಇಂಜಿನೀಯರ್ ಸುನೀತಾ ಪಟಗಾರ ಇವರು ಕೃತಕ ಬುದ್ಧಿಶಕ್ತಿಗೆ ಸಂಬಂಧಿಸಿದ ತಂತ್ರಜ್ಞಾನದ ಕುರಿತು ಪಿಪಿಟಿ ಪ್ರಾತ್ಯಕ್ಷಿಕೆಯ ಮೂಲಕ ಸವಿಸ್ತಾರವಾದ ವಿವರಣೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಪಿ. ಭಂಡಾರಕರ ಪ್ರಸ್ತುತ ಕಾಲಘಟ್ಟದಲ್ಲಿ ಎಐ ತಂತ್ರಜ್ಞಾನದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಡಾ. ಜಿ.ಡಿ. ಭಟ್ ಸ್ವಾಗತಿಸಿ, ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net