ಮನೆಯಲ್ಲಿ ಬಾಂಬ್‌ ಇಟ್ಟುಕೊಂಡಿದ್ದ ಭೂಪನ ಬಂಧನ!

ಬಾಂಬ್‌ ಸ್ಫೋಟದಿಂದ ಛಿದ್ರಗೊಂಡ ಮನೆ
ಬಾಂಬ್‌ ಸ್ಫೋಟದಿಂದ ಛಿದ್ರಗೊಂಡ ಮನೆ
Published on

ಪ್ರಮುಖ ಮುಖ್ಯಾಂಶಗಳು

  • ಹಳಿಯಾಳ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ
  • ಕಾಡು ಪ್ರಾಣಿ ಹೊಡೆಯಲು ಬಾಂಬ್‌ ತಯಾರಿಸಿ ಇಟ್ಟುಕೊಂಡಿದ್ದ ವ್ಯಕ್ತಿ
  • ಆಕಸ್ಮಿಕವಾಗಿ ಬಾಂಬ್‌ ಸ್ಫೋಟಗೊಂಡು ಮೂರು ಮನೆಗಳಿಗೆ ಹಾನಿ
ಹಳಿಯಾಳ: ಕಾಳಗಿನಕೊಪ್ಪ ಗ್ರಾಮದಲ್ಲಿ ಸಂಭವಿಸಿದ ನಾಡಬಾಂಬ್ ಸೋಟಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ.
ವಸಂತ ಕೊರವರ ಎಂಬಾತನನ್ನು ಹುಬ್ಬಳ್ಳಿ ತಾರಿಹಾಳ ಬಸ್ ನಿಲ್ದಾಣದ ಬಳಿ ಬಂಽಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಇನ್ನೊಬ್ಬ ಆರೋಪಿ ಮುನೇಶ್ವರ ಕೊರವರ್‌ಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಎಸ್‌ಪಿ ದೀಪನ್ ಅವರು ತಿಳಿಸಿದ್ದಾರೆ.
ಜೂನ್ 22 ರ ಬೆಳಗಿನಜಾವ ಕಾಳಗಿನಕೊಪ್ಪ ಗ್ರಾಮದಲ್ಲಿ ಬೆಳಗಿನಜಾವ ಭಾರೀ ಸೋಟ ಸಂಭವಿಸಿತ್ತು. ವಾಸುದೇವ ಕೊರವರ ಮನೆಯಲ್ಲದೇ ಅಕ್ಕಪಕ್ಕದ ಮೂರು ಮನೆಗಳಿಗೂ ಹಾನಿಯಾಗಿತ್ತು. ಸೋಟಕ್ಕೆ ಕಾರಣವಾದ ಮನೆಯ ಮಾಲೀಕ ವಾಸುದೇವ ಕೊರವರ ಹಾಗೂ ಮಗ ಮುನೇಶ್ವರ ಕೊರವರ್ ನಾಪತ್ತೆಯಾಗಿದ್ದರು.
ಪರಿಶೀಲನೆ ನಡೆಸಿದಾಗ ವಾಸುದೇವ ಕೊರವರ ಮನೆಯಲ್ಲಿ ನಾಡ ಬಾಂಬ್ ತಯಾರಿಕೆಗೆ ಬಳಸುವ ರಾಸಾಯನಿಕ ಹಾಗೂ ಕಾಡು ಹಂದಿಯ ಕೋರೆ ಹಲ್ಲು ಪತ್ತೆಯಾಗಿತ್ತು. ಅಲ್ಲದೇ, ಗ್ರಾಮದ ಕೆರೆಯ ಬಳಿ ಇನ್ನೆರಡು ಜೀವಂತ ನಾಡ ಬಾಂಬ್‌ಗಳು ಪತ್ತೆಯಾಗಿದ್ದವು. ಮಂಗಳೂರಿನಿಂದ ಬಾಂಬ್ ನಿಷ್ಟ್ರಿಯ ದಳದ ಸಿಬ್ಬಂದಿ ಆಗಮಿಸಿ ಇಡೀ ಗ್ರಾಮದಲ್ಲಿ ಪರಿಶೀಲಿಸಿದ್ದರು. ಜೀವಂತ ಬಾಂಬ್ ಅನ್ನು
ನಿಷ್ಟ್ರಿಯ
ಗೊಳಿಸಿದ್ದರು.
ವಾಸುದೇವ ಕೊರವರ ಬಂಧನಕ್ಕೆ ತಂಡ ರಚಿಸಿದ್ದು, ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐಗಳಾದ ಕೃಷ್ಣ ಗೌಡ ಅರಕೆರಿ, ಕಿರಣ ಪಾಟೀಲ, ಮಹಾಂತೇಶ ನಾಯಕ, ಸಿಬ್ಬಂದಿ ಮೊಹಮದ್ ಶಫಿ, ಎಂ.ಎ.ಮುಲ್ಲಾ, ಕೃಷ್ಣ ಬಿಳಿವರಿ, ಬಸವರಾಜ ತೇಲಸಂಗ, ಬಸವರಾಜ ತ್ಯಾಪಿ, ಶ್ರೀಶೈಲ, ಬಸವರಾಜ ಹಗರಿ, ಮಲ್ಲಿಕಾರ್ಜುನ ಕುದರಿ, ವಿನೋದ, ಲಕ್ಷ್ಮಣ, ಅರವಿಂದ, ಮಂಜುನಾಥ, ನಿಂಗಪ್ಪ, ತಾಂತ್ರಿಕ ಸಿಬ್ಬಂದಿ ಉದಯ ಗುನಗಾ, ಚಂದ್ರ ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net