ಭಟ್ಕಳ :ಶಹರದ ನಡುವೆ ಇರುವ ಹಿಂದು ಶ್ರದ್ಧಾ ಸ್ಥಳ ಮುರಿನ ಕಟ್ಟೆಯನ್ನು ಮುಸ್ಲಿಂ ಸಮುದಾಯದವರು ಧ್ವಂಸ ಮಾಡಿದ್ದು, ಭಟ್ಕಳ ಬೂದಿ ಮುಚ್ಚಿದ ಕೆಂಡದಂತಾಗಿದೆ. ಘಟನೆಯ ಬಗ್ಗೆ ಹಿಂದು ಸಂಘಟನೆಗಳ ಮುಖಂಡರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಸಂಬಂಧ ಸೋಮವಾರ ಮುಸ್ಲಿಂ ಸಮುದಾಯದ 6 ಜನರನ್ನು ಬಂಽಸಲಾಗಿದೆ. ಭಟ್ಕಳದಲ್ಲಿ 300 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯಿಂದ ಭಾರಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಗಲಭೆ ತಡೆ ವಿಶೇಷ ಕಾರ್ಯಪಡೆ ಪಥ ಸಂಚಲನ ನಡೆಸಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸೇರಿ ಹಿರಿಯ ಅಧಿಕಾರಿಗಳು ಭಟ್ಕಳದಲ್ಲಿ ಬೀಡು ಬಿಟ್ಟಿದ್ದಾರೆ. ಮೇ 27 ರವರೆಗೆ ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಏನಿದು ಮುರಿನ ಕಟ್ಟೆ ವಿವಾದ.?
ಶಿರಸಿಯ ಮಾರಿಕಾಂಬಾ ದೇವಿಯ ಹೊರೆ ಇಳಿಸುವ ಸಂಪ್ರದಾಯ ಭಟ್ಕಳದಲ್ಲಿದೆ. ಹೊರ ಊರುಗಳಿಂದ ಇಲ್ಲಿ ಗೊಂಬೆ ಹಾಗೂ ಇತರ ವಸ್ತುಗಳನ್ನು ತಂದು ಶಹರದ ನಡುವೆ ಇರುವ ಮುರಿನ ಕಟ್ಟೆಯಲ್ಲಿ ಇಳಿಸಲಾಗುತ್ತದೆ. ಆ ಮುರಿನ ಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ತೆರವು ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಹಿಂದು ಸಂಘಟನೆಗಳ ಕೆಲವರು ಸೇರಿ ಅದನ್ನು ಭಾನುವಾರ ಮರು ನಿರ್ಮಾಣ ಮಾಡಿದ್ದರು. ರಾತ್ರಿಯದೇ ಅದನ್ನು ಮುಸ್ಲಿಮರು ಧ್ವಂಸ ಮಾಡಿದ್ದಾರೆ. ಅದನ್ನು ಖಂಡಿಸಿ ರಾತ್ರೋ ರಾತ್ರಿ ಹಿಂದು ಸಂಘಟನೆಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು.
ಮುರಿನ ಕಟ್ಟೆಯನ್ನು ಯಾವುದೇ ಹಿಂದು ಸಂಘಟನೆಗಳಲ್ಲ ಸರ್ಕಾರ ನಿರ್ಮಾಣ ಮಾಡಿದೆ. ಅದನ್ನು ರಕ್ಷಿಸಿಕೊಳ್ಳುವುದು ಸರ್ಕಾರಕ್ಕೆ ಗೊತ್ತಿದೆ.
ಮಂಕಾಳ ಎಸ್.ವೈದ್ಯ
ಜಿಲ್ಲಾ ಉಸ್ತುವಾರಿ ಸಚಿವ
ಭಾನುವಾರ ರಾತ್ರಿ ನಡೆದ ಘಟನೆಗೆ ಸಂಬAಽಸಿದAತೆ ಪೊಲೀರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ, ಸಂಚಾರಕ್ಕೆ ತಡೆ ಸೆಕ್ಷನ್‌ನಡಿ ಎಫ್‌ಐಆರ್ ಮಾಡಿ, 6 ಜನರನ್ನು ಬಂಽಸಲಾಗಿದೆ. ಇನ್ನೂ ತನಿಖೆ ನಡೆದಿದೆ.