ಫುಟ್‌ಪಾತ್ ವ್ಯಾಪಾರಿಗಳಿಗೆ ಪಪಂ ಸಿಬ್ಬಂದಿ ಕಿರಿಕಿರಿ

ಮುಂಡಗೋಡ ಬಸ್ ನಿಲ್ದಾಣದ ಎದುರಿಗೆ ಫುಟ್‌ಪಾತ್‌ನಲ್ಲಿರುವ ಹಣ್ಣಿನ ಅಂಗಡಿ.
ಮುಂಡಗೋಡ ಬಸ್ ನಿಲ್ದಾಣದ ಎದುರಿಗೆ ಫುಟ್‌ಪಾತ್‌ನಲ್ಲಿರುವ ಹಣ್ಣಿನ ಅಂಗಡಿ.
Published on
ಮುಂಡಗೋಡ: ಪಟ್ಟಣ ಪಂಚಾಯಿತಿ ಸಿಬ್ಬಂದಿ ಪಟ್ಟಣದ ಬಸ್ ನಿಲ್ದಾಣ ಎದುರಿನ ಹಣ್ಣು ಹಾಗೂ ಪಾನ್‌ಶಾಪ್ ಅಂಗಡಿಯವರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಎರಡು ಅಂಗಡಿಗಳ ವ್ಯಾಪಾರಸ್ಥರು ಆರೋಪಿಸಿದ್ದಾರೆ.
"

ಪಪಂ ಸಿಬ್ಬಂದಿ ಪದೇಪದೆ ಬಂದು ಹಣ ಕೇಳುತ್ತಾರೆ. ಹಣ ನೀಡದಿರುವುದರಿಂದ ವ್ಯಾಪಾರದ ವೇಳೆ ಬಂದು ತಕ್ಕಡಿ ತೆಗೆದುಕೊಂಡು ಹೋಗಿ ತೊಂದರೆ ಕೊಡುತ್ತಿದ್ದಾರೆ. ಹೀಗೆ ನಡೆದರೆ ಬ್ಯಾಂಕ್ ಹಾಗೂ ಸಂಘದಲ್ಲಿ ಮಾಡಿದ ಸಾಲ ಹೇಗೆ ತೀರಿಸುವುದು. ಜೀವನ ಹೇಗೆ ನಡೆಸುವುದು ಎಂದು ತಿಳಿಯದಾಗಿದೆ.

"

ನಡೆದಿರುವ ಘಟನೆ ಗಮನಕ್ಕೆ ಬಂದಿದೆ. ಈ ಸಂಬಂಧ ಸಿಬ್ಬಂದಿಯಿಂದ ಮಾಹಿತಿ ಪಡೆದು ಸರಿಪಡಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net