ವಿದ್ಯೆಯ ಜತೆಗೆ ಬುದ್ಧಿಯ ಸಂಸ್ಕಾರವಿರಲಿ

ಸಿದ್ದಾಪುರದ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಸುಬ್ರಾಯ ಮತ್ತಿಹಳ್ಳಿ, ಮಾಲತಿ ಭಟ್ಟ, ಚಂದ್ರಶೇಖರ ನಾಯ್ಕ, ಎಂ.ಕೆ.ನಾಯ್ಕ,ಗೋಪಾಲ ನಾಯ್ಕ, ತಮ್ಮಣ್ಣ ಬೀಗಾರ ಇತರರಿದ್ದರು.
ಸಿದ್ದಾಪುರದ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಸುಬ್ರಾಯ ಮತ್ತಿಹಳ್ಳಿ, ಮಾಲತಿ ಭಟ್ಟ, ಚಂದ್ರಶೇಖರ ನಾಯ್ಕ, ಎಂ.ಕೆ.ನಾಯ್ಕ,ಗೋಪಾಲ ನಾಯ್ಕ, ತಮ್ಮಣ್ಣ ಬೀಗಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ
ಸಿದ್ದಾಪುರ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಬರಹಗಾರ್ತಿ ಮಾಲತಿ ಭಟ್ಟ ಹೇಳಿದರು.
ಪಟ್ಟಣದ ಬಾಲಭವನದಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಭಾವ’ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಆಯೋಜಿಸುವ ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರಕಟಣೆ, ಬರಹಗಾರರಿಗೆ ಪ್ರಶಸ್ತಿ ಮತ್ತಿತರ ಚಟುವಟಿಕೆಗಳ ಮೂಲಕ ಜನಸಾಮಾನ್ಯರಿಂದ ತೊಡಗಿ, ಸಾಹಿತ್ಯಾಸಕ್ತರಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಕನ್ನಡಿಗರನ್ನು ಒಗ್ಗೂಡಿಸುವ, ಕನ್ನಡಾಭಿಮಾನ ಬೆಳೆಸುವ ಕಾರ್ಯ ಮಾಡುತ್ತ ಬಂದಿದೆ. ಸಾಹಿತ್ಯ ಸೃಷ್ಟಿ ಸಾಮಾಜಿಕ ಹೊಣೆಗಾರಿಕೆಯೂ ಕೂಡ. ವಿದ್ಯಾವಂತರಾದರೆ ಸಾಲದು. ಬುದ್ಧಿಯ ಸಂಸ್ಕಾರವೂ ಅಗತ್ಯ. ಅಂಥ ಕೊಡುಗೆಯನ್ನು ಸದಭಿರುಚಿಯ ಓದು ನೀಡುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದರು.
ರಾಜಕಾರಣದ ವೇದಿಕೆಯಾಗುತ್ತಿದೆಯೇ ಕಸಾಪ!
ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಸಂಕಟ ಮತ್ತು ಸಂಭ್ರಮಗಳ ನಡುವೆ ಕನ್ನಡವಿದೆ. ಕನ್ನಡದ ಉಳಿವಿಗಾಗಿ, ಭಾಷಾ ಸಂಸ್ಕೃತಿಯ ಬೆಳವಣಿಗೆಗಾಗಿ ಜನ್ಮ ತಾಳಿದ ಸಾಹಿತ್ಯ ಪರಿಷತ್ತು ನಿಘಂಟು ಪ್ರಕಟಣೆ ಮುಂತಾದ ಹಲವು ಮಹತ್ತರ ಕಾರ್ಯಗಳನ್ನು ಮಾಡಿದೆ. ಇತ್ತೀಚೆಗೆ ಜನರಿಂದ ದೂರವಾಗಿ, ರಾಜಕಾರಣದ ವೇದಿಕೆಯಾಗುತ್ತಿರುವ ಅಪಾಯ ಕಂಡುಬರುತ್ತಿದೆ. ನಮ್ಮ ಅರಿವು ಮತ್ತು ಮರೆವಿನ ಕಾರಣದಿಂದ ಕನ್ನಡ ಯಾವ ಹಂತಕ್ಕೆ ಏರಬೇಕಿತ್ತೋ ಆ ಮಟ್ಟಕ್ಕೆ ಏರಿಲ್ಲ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ, ಲಯನ್ಸ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ, ಕನ್ನಡಪರ ಹೋರಾಟಗಾರ ಶಂಕರಮೂರ್ತಿ ಕತ್ತಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಉಪಸ್ಥಿತರಿದ್ದರು.
ಸುಮಿತ್ರಾ ಶೇಟ್, ನೀಲಮ್ಮ ಕೊಂಡ್ಲಿ, ಗೋಪಾಲ ಕಾನಳ್ಳಿ, ಅಸ್ಲಾಂ ಶೇಖ್ ಕನ್ನಡ ಗೀತೆಗಳನ್ನು ಹಾಡಿದರು. ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಶೇಟ್ ಸ್ವಾಗತಿಸಿದರು. ಖಜಾಂಚಿ ಪಿ.ಬಿ. ಹೊಸೂರ ಪ್ರಾಸ್ತಾವಿಕ ಮಾತನಾಡಿದರು. ಎಂ.ಎನ್. ನಾಯ್ಕ ನಿರೂಪಿಸಿದರು.
"

ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಬರಹಗಾರರನ್ನು ಬೆಳೆಸಿದೆ. ಓದುಗರಿಗೆ ಅಮೂಲ್ಯವಾದ ಕೃತಿಗಳ ಪ್ರಕಟಣೆ ಮಾಡಿದೆ. ಕನ್ನಡಕ್ಕೆ ಪರಿಷತ್ತು ಕೊಟ್ಟ ಕೊಡುಗೆ ಅಪಾರ.

— ತಮ್ಮಣ್ಣ ಬೀಗಾರ, ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net