ಶೀಘ್ರ ಉದ್ಘಾಟನೆಗೆ ಸಿದ್ಧಗೊಳ್ಳಲಿ ಅಕ್ಕ ಕೆಫೆ

ಯಲ್ಲಾಪುರ ತಾಲೂಕು ಪಂಚಾಯಿತಿ ಆವಾರದ ಇಂದಿರಾ ಕ್ಯಾಂಟೀನ್ ಬಳಿ ಮಂಗಳವಾರ ಅಕ್ಕ ಕೆಫೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.
ಯಲ್ಲಾಪುರ ತಾಲೂಕು ಪಂಚಾಯಿತಿ ಆವಾರದ ಇಂದಿರಾ ಕ್ಯಾಂಟೀನ್ ಬಳಿ ಮಂಗಳವಾರ ಅಕ್ಕ ಕೆಫೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆದಾರರಿಗೆ ಶಾಸಕ ಶಿವರಾಮ ಹೆಬ್ಬಾರ ಸೂಚನೆ
ಯಲ್ಲಾಪುರ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವ-ಸಹಾಯ ಸಂಘಗಳು ಸ್ವ ಉದ್ಯೋಗ ಮಾಡುವ ಮೂಲಕ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕು ಪಂಚಾಯಿತಿ ಆವಾರದ ಇಂದಿರಾ ಕ್ಯಾಂಟೀನ್ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆಶ್ರಯದಲ್ಲಿ ಮಂಗಳವಾರ ಅಕ್ಕ ಕೆಫೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಕ್ಕ ಕೆಫೆ ಹಳ್ಳಿಯಿಂದ ಬಂದ ಬಡವರಿಗಾಗಿ ಉತ್ತಮ ಗುಣಮಟ್ಟದ ಊಟೋಪಚಾರ ವ್ಯವಸ್ಥೆ ನೀಡಲಿದೆ. ಸ್ವ-ಸಹಾಯ ಸಂಘದ ಮೂಲಕ ಉದ್ಯೋಗ ಸೃಷ್ಟಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದ ಅವರು ಮುಂಬರುವ ಒಂದೂವರೆ ತಿಂಗಳಿನಲ್ಲಿ ಈ ಕಟ್ಟಡ ಪೂರ್ತಿಗೊಳಿಸಿ ಅಕ್ಕ ಕೆಫೆ ಉದ್ಘಾಟನೆಯಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ತಾಪಂ ಇಒ ರಾಜೇಶ ಧನವಾಡಕರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಸಾಮಾಜಿಕ ಕಾರ್ಯಕರ್ತರಾದ ವಿಜಯ ಮಿರಾಶಿ, ವಿ.ಎಸ್. ಭಟ್ಟ, ಸಂಜೀವಿನ ಒಕ್ಕೂಟದ ಜಗದೀಶ ನಾಯಕ, ನಿರ್ಮಿತಿ ಕೇಂದ್ರದ ಗುತ್ತಿಗೆದಾರ ಗುರುಪ್ರಸಾದ ಅಂಕೋಲೆಕರ ಇದ್ದರು. ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಂಜಣ್ಣ ಬಿ, ರಾಜಾರಾಮ ವೈದ್ಯ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net