ಎಂಬಿಬಿಎಸ್‌ ವಿದ್ಯಾರ್ಥಿಗಳಿಂದ ಕುಟುಂಬಗಳ ದತ್ತು ಏಕೆ ಗೊತ್ತಾ..?

ಅಂಗಡಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಕ್ರಿಮ್ಸ್‌ ನಿರ್ದೇಶಕಿ ಡಾ.ಪೂರ್ಣಿಮಾ ಉದ್ಘಾಟಿಸಿದರು.
ಅಂಗಡಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಕ್ರಿಮ್ಸ್‌ ನಿರ್ದೇಶಕಿ ಡಾ.ಪೂರ್ಣಿಮಾ ಉದ್ಘಾಟಿಸಿದರು.
Published on
ಕಾರವಾರ: ಎಂಬಿಬಿಎಸ್ ವಿದ್ಯಾರ್ಥಿಗಳು ಸಮುದಾಯದ ಕುಟುಂಬಗಳನ್ನು ದತ್ತು ಪಡೆದು, ಅವರ ಆರೋಗ್ಯ, ಅಗತ್ಯಗಳು ಹಾಗೂ ಆರೋಗ್ಯದ ಮೇಲಾಗುವ ಸಾಮಾಜಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸುವದು ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ.ತಿಳಿಸಿದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕ್ರಿಮ್ಸ್) ಸಮುದಾಯ ವೈದ್ಯಕೀಯ ವಿಭಾಗದಿಂದ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟಿçÃಯ ವೈದ್ಯಕೀಯ ಆಯೋಗವು, ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ `ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ' ಎಂಬ ಶೀರ್ಷಿಕೆಯಲ್ಲಿ ಸಮುದಾಯ ಆಧಾರಿತ ನವೀನ ಕಲಿಕಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಅದರಲ್ಲಿ ಕುಟುಂಬ ದತ್ತು ಕಾರ್ಯಕ್ರಮವೂ ಸೇರಿದೆ. ಪ್ರತಿ ವಿದ್ಯಾರ್ಥಿ ಒಂದೊAದು ಕುಟುಂಬದ ಆರೋಗ್ಯ ವಿಚಾರಗಳನ್ನು ತಿಳಿದು, ಅವರಿಗೆ ಚಿಕಿತ್ಸೆ ನೀಡುವರು, ಆ ಮೂಲಕ ಅಧ್ಯಯನ ನಡೆಸುವರು ಎಂದರು.
ಕ್ರಿಮ್ಸ್ ನ 12 ವಿಭಾಗಗಳ ತಜ್ಞ ವೈದ್ಯರು ಶಿಬಿರದಲ್ಲಿ ರೋಗಿಗಳಿಗೆ ತಜ್ಞರ ಸಮಾಲೋಚನೆ, ರೋಗನಿರ್ಣಯ, ಚಿಕಿತ್ಸೆ, ಆರೋಗ್ಯ ಶಿಕ್ಷಣ ಹಾಗೂ ಅಗತ್ಯವಿದ್ದ ಕಡೆಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು (ರೆಫರಲ್) ಸೇವೆಗಳನ್ನು ಒದಗಿಸಿದರು. ಶಿಬಿರದಲ್ಲಿ ಒಟ್ಟು 210 ಫಲಾನುಭವಿಗಳು ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಕ್ರಿಮ್ಸ್ನ ವೈದ್ಯಕೀಯ ಅದೀಕ್ಷಕ ಡಾ. ನರೇಶ್ ಪಾವಸ್ಕರ್, ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಹೇಮಗಿರಿ ಕೆ., ಕ್ರಿಮ್ಸ್ನ ಸ್ಥಾನಿಕ ವೈದ್ಯಾಕಾರಿ ಡಾ. ವಿಜಯರಾಜ್ ಎನ್. ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಚನಾ ಎ. ಆರ್. ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ. ಸುದೀತಾ ಪೆಡ್ನೆಕರ್ ಮತ್ತು ದೇಸಾಯಿ ಉಪಸ್ಥಿತರಿದ್ದರು.ಡಾ. ಮಾಲತೇಶ್ ಉಚಿಡಿ ನಿರೂಪಿಸಿದರು.. ಡಾ. ಡಾ.ಗಿರೀಶ ಎಚ್.ಒ. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net