ಗೋಕರ್ಣಕ್ಕೆ ಹೆಚ್ಚುವರಿ ಕಾರ್ಮಿಕರ ನೇಮಕಕ್ಕೆ ಕ್ರಮ

ಗೋಕರ್ಣದ ಪುರಾಣ ಪ್ರಸಿದ್ಧ ಮಂದಿರಗಳಿಗೆ ಭೇಟಿ ನೀಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಪೂಜೆ ಸಲ್ಲಿಸಿದರು. ಆಯೋಗದ ಶಂಕರ, ಮಹಾದೇವಸ್ವಾಮಿ, ತಾಪಂ ಇಒ ರಾಜೇಂದ್ರ ಭಟ್ಟ ಇತರರಿದ್ದರು.
ಗೋಕರ್ಣದ ಪುರಾಣ ಪ್ರಸಿದ್ಧ ಮಂದಿರಗಳಿಗೆ ಭೇಟಿ ನೀಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಪೂಜೆ ಸಲ್ಲಿಸಿದರು. ಆಯೋಗದ ಶಂಕರ, ಮಹಾದೇವಸ್ವಾಮಿ, ತಾಪಂ ಇಒ ರಾಜೇಂದ್ರ ಭಟ್ಟ ಇತರರಿದ್ದರು.
Published on
ಗೋಕರ್ಣ: ಇಲ್ಲಿನ ಶ್ರೀ ಮಹಾಗಣಪತಿ, ಆತ್ಮಲಿಂಗ ಸನ್ನಿಧಿ ಶ್ರೀ ಮಹಾಬಲೇಶ್ವರ ಮುಂತಾದ ಪುರಾಣ ಖ್ಯಾತ ಮಂದಿರಗಳಿಗೆ ಶುಕ್ರವಾರ ಭೇಟಿ ನೀಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಇಲ್ಲಿನ ಸ್ವಚ್ಛತಾ ಕಾರ್ಯ ಮತ್ತು ಸ್ಥಳಿಯ ಕಾರ್ಮಿಕರ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸ್ಥಳಿಯವಾಗಿ ನಡೆಸಲಾಗುವ ಸ್ವಚ್ಛತಾ ಕೆಲಸ ಮತ್ತು ಸ್ವಚ್ಛತಾ ಕಾಮಿರ್ಕರ ಸಮಸ್ಯೆಗಳನ್ನು ತಾಪಂ ಇಒ ರಾಜೇಂದ್ರ ಭಟ್ಟ ವಿವರಿಸಿದರು. ಐದು ವಿವಿಧ ಬೀಚ್​ಗಳನ್ನು ಹೊಂದಿರುವ ಗೋಕರ್ಣ 8 ಕಿ.ಮೀ ವ್ಯಾಪ್ತಿ ಹೊಂದಿದೆ. ಕಳೆದ ಅನೇಕ ದಶಕಗಳಿಂದ ಇದರ ಕಾರ್ಯ ವ್ಯಾಪ್ತಿಗೆ ತಕ್ಕಂತೆ ಸ್ವಚ್ಛತಾ ಕಾಮಿರ್ಕರು ಇಲ್ಲದೇ ಇರುವುದರಿಂದ ನೈರ್ಮಲ್ಯ ನಿರ್ವಹಣೆಗೆ ವ್ಯತ್ಯಯ ಎದುರಾಗುತ್ತಿದೆ. ಗ್ರಾಪಂ ನಿಯಮಾನುಸಾರ ಕೇವಲ ಒಂದು ಸ್ವಚ್ಛತಾ ಸಿಬ್ಬಂದಿಯನ್ನು ಮಾತ್ರ ಸರ್ಕಾರ ಒದಗಿಸಲು ಸಾಧ್ಯವಾಗಿದೆ. ಪ್ರಸ್ತುತ ಇಲ್ಲಿ ಒಟ್ಟೂ 12 ಸ್ವಚ್ಛತಾ ಕಾಮಿರ್ಕರಿದ್ದು, ಉಳಿದವರಿಗೆ ಪಂಚಾಯಿತಿಯ ನಿಧಿಯಿಂದ ಸಂಬಳ ನೀಡಲಾಗುತ್ತಿದೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಮತ್ತು ಗ್ರಾಪಂ ವ್ಯಾಪ್ತಿಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದ್ದು ಕಾರಣ ಗೋಕರ್ಣದ ಪ್ರವಾಸೋದ್ಯಮಕ್ಕೆ ಉತ್ತಮ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಇಲ್ಲಿಗೆ ಅಗತ್ಯವಿರುವ ಇನ್ನೂ ಹೆಚ್ಚಿನ 15 ಸಿಬ್ಬಂದಿಯನ್ನು ಸರ್ಕಾರದಿಂದ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಆಯೋಗದ ಸದಸ್ಯ ಶಂಕರ, ಸ್ವಚ್ಛತಾ ಕಾಮಿರ್ಕರಿಗೆ ಸೇವೆ ಸಲ್ಲಿಸಲು ಸರ್ಕಾರಿ ನಿಯಮದ ಪ್ರಕಾರ ಅವಶ್ಯವಿರುವ ಸಮವಸ, ರೇನ್​ಕೋಟ್​ ಇತ್ಯಾದಿ ಪರಿಕರಗಳ ಪೂರೈಕೆ ಕುರಿತು ವಿಚಾರಿಸಿದರು.
ಇಲ್ಲಿನ ಸಮಸ್ಯೆಯ ಮಾಹಿತಿ ಪಡೆದು ಮಾತನಾಡಿದ ಆಯೋಗದ ಅಧ್ಯಕ್ಷ ಪಿ.ರು, ಹಾಲಿ ಜಾರಿಯಲ್ಲಿರುವ ಕಾನೂನು ಪ್ರಕಾರ ಗ್ರಾಪಂಗಳಿಗೆ ಹೆಚ್ಚಿನ ಕಾಮಿರ್ಕರನ್ನು ನೇಮಕಾತಿ ಮಾಡಲು ಆಸ್ಪದವಿಲ್ಲ. ಆದರೆ ಇಲ್ಲಿನ ಪ್ರವಾಸೋದ್ಯಮ ಮತ್ತು ಧಾಮಿರ್ಕ ಮಹತ್ವವನ್ನು ಪರಿಗಣಿಸಿ ಆದಷ್ಟು ಹೆಚ್ಚು ಕಾಮಿರ್ಕರನ್ನು ಸರ್ಕಾರದಿಂದ ಪೂರೈಸಲು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಗೋಕರ್ಣಕ್ಕೆ ವಿಶೇಷ ಆದ್ಯತೆಯ ಮೇಲೆ ಕಾರ್ಮಿಕರ ಸಂಖ್ಯೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕಾರಣ ಇಲ್ಲಿನ ಕಾರ್ಮಿಕ ಸಮಸ್ಯೆ, ಗ್ರಾಪಂ ಆಥಿರ್ಕ ಸ್ಥಿತಿಗತಿ ಮತ್ತಿತರ ಎಲ್ಲ ವಿವರಗಳನ್ನುಳ್ಳ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ಅವರು ಸೂಚಿಸಿದರು.
ಸಂಶೋಧನಾ ಅಧಿಕಾರಿ ಮಹಾದೇವಸ್ವಾಮಿ, ಗ್ರಾಪಂ ಪಿಡಿಒ ವಿ.ಎ. ಪಟಗಾರ, ಮಂಜುನಾಥ ಕೆ.ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net