clouds ಗೋಕರ್ಣದಲ್ಲಿ ಕಪ್ಪನೆಯ ಮೋಡಗಳ ದರ್ಶನ

ಗೋಕರ್ಣದ ಕುಡ್ಲೆ ಬೀಚ್​ನ ವಿಶಾಲ ಸಮುದ್ರದ ಮೇಲ್ಮೆಯಲ್ಲಿ ಬಹು ವಾರಗಳ ನಂತರ ಆಕಷಿರ್ಸಿದ ಕಪ್ಪನೆಯ ಮೋಡಗಳ clouds ದರ್ಶನ.
ಗೋಕರ್ಣದ ಕುಡ್ಲೆ ಬೀಚ್​ನ ವಿಶಾಲ ಸಮುದ್ರದ ಮೇಲ್ಮೆಯಲ್ಲಿ ಬಹು ವಾರಗಳ ನಂತರ ಆಕಷಿರ್ಸಿದ ಕಪ್ಪನೆಯ ಮೋಡಗಳ clouds ದರ್ಶನ.
Published on
ಗೋಕರ್ಣ: ಹಲವು ವಾರಗಳಿಂದ ಕಂಡುಬಂದಿದ್ದ ಕಡು ಬೇಸಿಗೆಯ ಸುಡು ವಾತಾವರಣದಲ್ಲಿ ಮಾಯವಾಗಿದ್ದ ಮಳೆ ಗುರುವಾರ ಸಂಜೆ ಮತ್ತೆ ಪ್ರತ್ಯವಾಗಿದೆ.
ಇಲ್ಲಿನ ಓಂ, ಕುಡ್ಲೆ ಮತ್ತು ಮುಖ್ಯ ಸಮುದ್ರದ ಮೇಲೆಲ್ಲ ದಟ್ಟನೆಯ ಕಪ್ಪು ಮೋಡಗಳು ಆವರಿಸಿಕೊಂಡಿವೆ. ಖ್ಯಾತ ಕುಡ್ಲೆ ಬೀಚ್​ನ ಸಮುದ್ರದ ಮೇಲ್ಮೆಯನ್ನು ಆಚ್ಛಾದಿಸಿಕೊಂಡ ಬಿಗಿ ಮೋಡಗಳ clouds ದರ್ಶನ ಹೊಸ ಆಕರ್ಷಣೆಯನ್ನು ಉಂಟುಮಾಡಿ ಸಂಜೆ ಐದು ಗಂಟೆ ವೇಳೆಗಾಗಲೇ ಕತ್ತಲು ಆವರಿಸುವಂತಾಯಿತು.
ಆತರುವಾಯ ಸಂಜೆ ಐದರ ನಂತರ ಸುಳಿಗಾಳಿಯೊಂದಿಗೆ ಪ್ರಾರಂಭವಾದ ಹದವಾದ ಮಳೆ ಏಳು ಗಂಟೆಯವರೆಗೆ ನಿರಂತರ ಸುರಿಯಿತು. ನಂತರ ಕೂಡ ಮಳೆ ಮತ್ತೆ ಮುಂದುವರಿದು ತಂಪಿನ ವಾತಾವರಣಕ್ಕೆ ಕಾರಣವಾಗಿದೆ. ಕುಡ್ಲೆ ಮತ್ತಿತರ ಬೀಚ್​ಗಳಲ್ಲಿ ಪ್ರವಾಸಿಗರ ಸಂಖ್ಯೆ ವಿರಳವಾಗಿರುವ ಕಾರಣ ಬೀಚ್​ಗಳು ಬರಿದಾಗಿದ್ದವು.
ಗುರುವಾರ ಸಂಜೆಯಿಂದ ಪುನಃ ಕಾಣಸಿದ ಮಳೆಯಿಂದ ಎರಡು ಮೂರು ದಿನಗಳಿಂದ ಇಲ್ಲಿನ ಭತ್ತದ ಗದ್ದೆಗಳಲ್ಲಿ ನೆಟ್ಟಿ ಮಾಡಲಾದ ಸಸಿಗಳು ಮಳೆ ಸಿಂಚನದಿಂದ ಜೀವ ಚೆತನ್ಯ ಪಡೆಯುವಂತಾಗಿ ರೆತರಲ್ಲಿ ಸಂತಸ ಮೂಡುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net