ಮುಂಡಗೋಡ: ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಶುಕ್ರವಾರ ಗಾಳಿ ಸಹಿತ ಸುರಿದ ಮಳೆಗೆ rain ಕೆಲ ಮನೆಗಳ ಹೆಂಚು, ಶೀಟ್‌ಗಳು ಹಾರಿ ಹೋದ ಘಟನೆ ನಡೆದಿದೆ.
ಮಧ್ಯಾಹ್ನ ವೇಳೆ ಬಾರಿ ಬಿರುಗಾಳಿಯೊಂದಿಗೆ ಮಳೆ ಆರಂಭವಾಯಿತು. ಗಾಳಿಯ ವೇಗಕ್ಕೆ ಹತ್ತಾರು ಮನೆಗಳ ಹಂಚು ಹಾಗೂ ತಗಡಿನ ಶೀಟ್‌ಗಳು ಹಾರಿ ಹೋಗಿವೆ.
ಇದರಿಂದ ಮಳೆಯ ನೀರು ಮನೆಯಲ್ಲಿ ಸಂಗ್ರಹವಾಗಿ ವಸ್ತುಗಳೆಲ್ಲ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಮನೆಯಲ್ಲಿನ ವಸ್ತುಗಳನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ಪರದಾಡುವಂಥ ಸ್ಥಿತಿ ನಿರ್ಮಾಣವಾಯಿತು.