ಬೆೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ಸರ್ಕಾರ ಕೈಬಿಡಬೇಕು, ಶರಾವತಿ, ಬೇಡ್ತಿ-ಗಂಗಾವಳಿ, ಅಘನಾಶಿನಿ, ಶಾಲ್ಮಲಾ, ಪಟ್ಟಣದಹೊಳೆ ನದಿ ಕಣಿವೆಗಳ ಉಳಿಸು ತಾಯಿ ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯವರು ದೇವಿಯನ್ನು ಪ್ರಾರ್ಥಿಸಿದರು. ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಬೇಡ್ತಿ-ಅಘನಾಶಿನಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಕರೂರ ಸೀಮಾ ಅಧ್ಯಕ್ಷ ಉಮಾಪತಿ ಭಟ್ ಮತ್ತಿಗಾರ, ದಾಮೋದರ ಭಟ್ ಶಿರಸಿ, ನಗರ ಭಾಗಿ ಯೋಗ ಮಂದಿರದ ಕಾರ್ಯದರ್ಶಿ ಸಿ.ಎಸ್ ಹೆಗಡೆ, ಶ್ರೀ ಮಠದ ವ್ಯವಸ್ಥಾಪಕ ಮಂಜುನಾಥ ಹೆಗಡೆ, ಇತರರು ಹಾಗೂ ಶ್ರೀ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್.ಜಿ. ನಾಯ್ಕ ಮತ್ತು ಆಡಳಿತ ಮಂಡಳಿಯವರು ವಿಶೇಷ ಪೂಜೆ ಪಾಲ್ಗೊಂಡಿದ್ದರು.