muddy road : ಕೆಸರು ಗದ್ದೆಯಾದ ರಾಷ್ಟ್ರೀಯ ಹೆದ್ದಾರಿ

ಕೆಸರುಮಯವಾಗಿರುವ ಶಿರಸಿಯಿಂದ ಬಿಸಲಕೊಪ್ಪವರೆಗಿನ ರಸ್ತೆ.
ಕೆಸರುಮಯವಾಗಿರುವ ಶಿರಸಿಯಿಂದ ಬಿಸಲಕೊಪ್ಪವರೆಗಿನ ರಸ್ತೆ.
Published on

ಪ್ರಮುಖ ಮುಖ್ಯಾಂಶಗಳು

  • ಅಸಮರ್ಪಕ ಕಾಮಗಾರಿಗೆ ಸವಾರರು ಹೈರಾಣ
  • ಸೂಕ್ತ ಕ್ರಮಕ್ಕೆ ಸ್ಥಳಿಯರ ಆಗ್ರಹ
ಶಿರಸಿ: ಕಳೆದ ಎರಡು ದಿನದ ಮಳೆಗೆ ಶಿರಸಿ-ಹಾವೇರಿ ರಸ್ತೆ ಪುನಃ ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಬೇಸಿಗೆಯ ಕೊನೇ ಣದಲ್ಲಿ ತುರ್ತಾಗಿ ಮಾಡಿದ ಕಾಮಗಾರಿಗಳು ಈಗ ಕೆಲವೆಡೆ ಕೆಸರು ಗದ್ದೆಗಳಾಗಿ ( muddy road ) ಮಾರ್ಪಟ್ಟಿದ್ದರೆ, ಇನ್ನು ಕೆಲವೆಡೆ ರಸ್ತೆ ಯಾವುದು, ಚರಂಡಿ ಯಾವುವುದು ಎಂಬುದೇ ತಿಳಿಯದಂತಾಗಿದೆ.
ಶಿರಸಿಯ ಚಿಪಗಿ ವೃತ್ತದಿಂದ ಬಿಸಲಕೊಪ್ಪವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವರ್ಷ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿತ್ತು. ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡದೇ ರಸ್ತೆಯ ಇಕ್ಕೆಲಗಳಲ್ಲಿಯೂ ಅಗೆದು ಹಾಕಿದ್ದರಿಂದ ಸಂರ್ಪೂಣ ಬೇಸಿಗೆ ಉದ್ದಕ್ಕೂ ವಾಹನ ಸವಾರರು ಸಮಸ್ಯೆ ಎದುರಿಸಿದ್ದರು.
ಒಂದು ವಾಹನ ಸಾಗಿತೆಂದರೆ ಅದರ ಹಿಂದೇ ದಟ್ಟನೆಯ ಧೂಳಿನ ಕಾಮೋರ್ಡಗಳು ಎದ್ದು, ಹಿಂಬದಿ ಸವಾರರು ದಾರಿ ಕಾಣದೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದು ಈ ವರ್ಷ ಮುಗಿಯುವ ಕಾಮಗಾರಿ ಅಲ್ಲ ಎಂದು ದೃಢಪಟ್ಟಮೇಲೆ ಸ್ಥಳಿಯರು ರಸ್ತೆ ತಡೆ, ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, ಈ ವರ್ಷ ಮಳೆಗಾಲ ಆರಂಭವೂ ವಿಳಂಬವಾಗಿದ್ದರಿಂದ ಗುತ್ತಿಗೆದಾರರು ತಾವು ಅಗೆದುಹಾಕಿದ್ದ ಜಾಗದಲ್ಲಿ ತುರ್ತಾಗಿ ಡಾಂಬರೀಕರಣ ನಡೆಸಿ, ಅಂತೂ ವಾಹನ ಸಾಗುವಂತೆ ಮಾಡಿದ್ದರು.
ಮಲೆನಾಡು, ಕರಾವಳಿ ಹಾಗೂ ಬಯಲುಸೀಮೆಯನ್ನು ಸಂಪಕಿರ್ಸುವ ಶಿರಸಿ&ಹಾವೇರಿ ರಾಷ್ಟ್ರೀಯ ಹೆದ್ದಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ರಸ್ತೆಯ ಹಲವೆಡೆ ಮಣ್ಣು ತುಂಬಿಕೊಂಡು, ಆಳವಾದ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸಂಚಾರ ದುಸ್ತರವಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಪರದಾಡುವಂತಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಯ ಮೇಲೆ ಹಾಕಲಾಗಿದ್ದ ಮಣ್ಣು ನೀರಿನಲ್ಲಿ ಬೆರೆತು ಕೆಸರಾಗಿ ಮಾರ್ಪಟ್ಟಿದೆ. ಇದರಿಂದ ರಸ್ತೆಯಲ್ಲಿ ಸಾಗುವ ಪ್ರತಿಯೊಂದು ವಾಹನ ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆಯ ಮೇಲೆ ಜಾರುವ ಕೆಸರು ಇರುವುದರಿಂದ ಸಣ್ಣ ತಪ್ಪಾದರೂ ವಾಹನ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದೆ. ಶಾಲಾ&ಕಾಲೇಜು ವಿದ್ಯಾಥಿರ್ಗಳು, ಉದ್ಯೋಗಿಗಳು ಹಾಗೂ ಗ್ರಾಮೀಣ ಭಾಗಗಳಿಂದ ನಗರಕ್ಕೆ ಆಗಮಿಸುವ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆಯಲ್ಲಿ ಎಲ್ಲೆಂದರಲ್ಲಿ ನೀರು ನಿಂತಿರುವುದರಿಂದ ಗುಂಡಿಗಳ ಆಳವೂ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರಿನಿಂದ ಗುಂಡಿಗಳು ಸಂರ್ಪೂಣ ಮುಚ್ಚಿಹೋಗಿರುವ ಕಾರಣ ವಾಹನಗಳು ಏಕಾಏಕಿ ಗುಂಡಿಗೆ ಇಳಿದು ಹಾನಿಗೊಳಗಾಗುತ್ತಿವೆ. ಇದೇ ಮಾರ್ಗದಲ್ಲಿ ಪ್ರತಿದಿನ ಸರಕು ಸಾಗಣೆ ಲಾರಿಗಳು, ಖಾಸಗಿ ಬಸ್​ಗಳು, ಸರ್ಕಾರಿ ಬಸ್​ಗಳು ಹಾಗೂ ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ರಸ್ತೆ ಕೆಟ್ಟಿರುವುದರಿಂದ ವಾಹನಗಳ ವೇಗ ಕಡಿಮೆಯಾಗಿದ್ದು, ಪ್ರಯಾಣದ ಅವಧಿಯೂ ಹೆಚ್ಚಾಗಿದೆ. ಕನಿಷ್ಟ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ಬಿಡಿಸಿಕೊಟ್ಟು ರಸ್ತೆಯ ಮೇಲೆ ನೀರು ನಿಲ್ಲದಂತೆ ತೋಡಿಕೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net