ಹಿತ ಮಿತ ಮತ್ತು ಮೇಧ್ಯ ಆಹಾರ ಒಳಗೆ ಬೇರು ಬಿಟ್ಟಿರುವ ಪಾಪವನ್ನೂ ಸುಡಬಲ್ಲದು. ಹಿತ ಆಹಾರದಲ್ಲಿ ನಿಹಿತ ಮತ್ತು ವಿಹಿತ ಎಂಬ ಎರಡು ಬಗೆ. ಪ್ರಕೃತಿ ದತ್ತವಾಗಿ ನಮಗೆ ಕೊಟ್ಟಿದ್ದು ನಿಹಿತ ಹಿತ. ಯಾವುದು ಬೇಕು, ಯಾವುದು ನಿಷಿದ್ಧ ಎಂದು ಶಾಸಗತವಾಗಿ ಆಯುರ್ವೇದ ಮತ್ತು ಧರ್ಮಶಾಸದಿಂದ ನಮಗೆ ಬಂದಿದ್ದು ವಿಹಿತ ಆಹಾರ. ಇನ್ನು ಮೇಧ್ಯ ಆಹಾರ ಎಂದರೆ ಪವಿತ್ರವಾದ ಆಹಾರವಾಗಿದೆ. ಮೇಧ್ಯ ಎಂದರೆ ಯಗಳ ಮುಖೇನ ಭಗವಂತನ ಅರ್ಪಣೆಗೆ ಯೋಗ್ಯವಾದ ವಸ್ತು. ಇಂತಹ ದೇವಾರ್ಪಣೆಗೆ ಯೋಗ್ಯವಾದ ಆಹಾರ ನಮ್ಮ ಶರೀರವನ್ನು ಸೇರಿ ಜಠರಾಗ್ನಿ ಪ್ರಜ್ವಲಿಸುವಂತೆ ಮಾಡಿ ಪಾಪ ನಾಶಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಒಳಗಿನ ಅಗ್ನಿಗೆ ಅನ್ನಪಾನವೇ ಇಂಧನ. ಹೀಗೆ ನಿತ್ಯ ಮಾಡುವ ಹಿತಮಿತದ ಪವಿತ್ರವಾದ ಭೋಜನವೇ ತಪಸ್ಸು. ಇಂತಹ ತಪದಿಂದ ಪ್ರಜ್ವಲಿತ ಅಗ್ನಿ ಪಾಪ, ದೋಷ ಮತ್ತು ರೋಗವನ್ನು ನಿಃಶೇಷ ಮಾಡಬಲ್ಲುದಾಗಿದೆ. ಇಂತಹ ತಪಸ್ಸಿನಿಂದ ಜಠರ ವೈಶ್ವಾನರನು ಪ್ರಜ್ವಲಿತನಾದಾಗ ಹುಲ್ಲು ಮೆದೆಗಳ ಸುಡುವ ಕಾಡ್ಗಿಚ್ಚಿನಂತೆ, ದೇಹಗತ ದೋಷಗಳ ಜೀವಗತ ಪಾಪಗಳ ದಹಿಸುವನು. ಲೇಶವೂ ಶೇಷವಿರದಂತೆ ಸೂತ್ರದಲಿ ಒಳಪಟ್ಟು ಬದುಕನ್ನು ನಡೆಸುತಿರೆ, ಹರಡಿ ಮೈಯೊಳು ಬಿಸಿಯ ಜ್ವಲಿಸಿ ಕಾಯಾಗ್ನಿ, ಕೋಟಿ ಜನ್ಮದ ಗಾಢ ನಿದ್ದೆಯನು ತೊರೆದೆದ್ದು ಸಾವುಗಳು ಪರಮ ಪದದೆಡೆಗೆ ಕುಂಡಲಿನಿ ಎಂದು ಶ್ರೀಗಳು ಸರ್ವರನ್ನು ಆಶೀರ್ವದಿಸಿದರು.