ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಆಕಾಶ್ ಹರಿಕಂತ್ರ, ತನ್ನ 1 ರಿಂದ 7 ನೇ ತರಗತಿಯನ್ನು ಕೊಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ್ತು 8 ರಿಂದ 10 ನೇ ತರಗತಿಯನ್ನು ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿದ್ದು, 8 ನೇ ತರಗತಿಯಲ್ಲಿದ್ದಾಗ NMMS ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತದನಂತರ SSLC ಯಲ್ಲಿ ಅತ್ಯುತ್ತಮ ಅಂಕ (621) ಗಳನ್ನು ಗಳಿಸಿದ್ದು, ತನ್ನ ಈ ಶೈಕ್ಷಣಿಕ ಸಾಧನೆಯಿಂದ ಜಪಾನ್ ದೇಶದ ಆಹ್ವಾನದ ಮೇರೆಗೆ ಅಲ್ಲಿಗೆ ಭೇಟಿ ನೀಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಅನುಭವವನ್ನು ಪಡೆದಿದ್ದಾರೆ.