ವಿಶ್ವಾಸವಿದ್ದಾಗಲೆ ಹಣಕಾಸು ಸಂಸ್ಥೆ ಬೆಳೆಯಲು ಸಾಧ್ಯ

ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿಯಮಿತ ಶಿರಾಲಿ ನೂತನ ಕಟ್ಟಡವನ್ನು ಉದ್ಘಾಟನೆ ಸಂದರ್ಭದಲ್ಲಿ ಸಿಲ್ವರ್ ಜ್ಯುಬಿಲಿ ಪಿಕ್ಸಡ್ ಡಿಫಾಸಿಟ್ ಸರ್ಟಿಫಿಕೆಟ್ ಅನ್ನು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಅಧ್ಯಕ್ಷ ಅಶೋಕ ಪೈ, ಸದಸ್ಯರಾದ ಅನಂತ ಕಾಮತ, ನರೇಂದ್ರ ನಾಯಕ, ನಾಗೇಶ ಪೈ ಇತರರಿದ್ದರು.
ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿಯಮಿತ ಶಿರಾಲಿ ನೂತನ ಕಟ್ಟಡವನ್ನು ಉದ್ಘಾಟನೆ ಸಂದರ್ಭದಲ್ಲಿ ಸಿಲ್ವರ್ ಜ್ಯುಬಿಲಿ ಪಿಕ್ಸಡ್ ಡಿಫಾಸಿಟ್ ಸರ್ಟಿಫಿಕೆಟ್ ಅನ್ನು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಅಧ್ಯಕ್ಷ ಅಶೋಕ ಪೈ, ಸದಸ್ಯರಾದ ಅನಂತ ಕಾಮತ, ನರೇಂದ್ರ ನಾಯಕ, ನಾಗೇಶ ಪೈ ಇತರರಿದ್ದರು.
Published on
ಭಟ್ಕಳ: ಹಣಕಾಸು ಸಂಸ್ಥೆಯಲ್ಲಿ ವಿಶ್ವಾಸ ಮುಖ್ಯವಾಗುತ್ತದೆ. ಒಂದು ಸಂಸ್ಥೆ ವಿಶ್ವಾಸದಿಂದ ಮುಂದುವರಿದಾಗ ಮಾತ್ರ ಉತ್ತಮ ಬೆಳವಣಿಗೆ ಸಾಧ್ಯ. ಹಣಕಾಸು ಸಂಸ್ಥೆಯಲ್ಲಿ ವಿಶ್ವಾಸವಿದ್ದಾಗ ಮಾತ್ರ ಠೇವಣಿದಾರರು, ಸಾಲಗಾರರು ಮುಂದೆ ಬರುತ್ತಾರೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ನುಡಿದರು.
ತಾಲೂಕಿನ ಶಿರಾಲಿಯಲ್ಲಿ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿಯಮಿತದ ನೂತನ ಕಟ್ಟಡ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ಕಾರ್ಯವಿಧಾನದ ಕುರಿತು ಶ್ಲಾಘಿಸಿದರು. ಮಾರುತಿ ಪತ್ತಿನ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳು ಶ್ರೀಗಳಿಂದಲೇ ಉದ್ಘಾಟನೆಯಾಗಿವೆ. ನೂತನ ಕಟ್ಟಡದ ಶಿಲಾನ್ಯಾಸವನ್ನು ನಾವು ನೆರವೇರಿಸಿದ್ದು, ಉದ್ಘಾಟನೆಯನ್ನು ನಾವೇ ಮಾಡಿದ್ದು ಸಂತಸ ತಂದಿದೆ. ನಮ್ಮ ಶ್ರೀಮಠದ ಆರಾಧ್ಯ ದೇವ ಹನುಮಂತನಾಗಿದ್ದು, ಇಲ್ಲಿಯೂ ಹನುಮಂತನೇ ಸಂಘದ ಚಿಹ್ನೆಯಾಗಿದ್ದಾನೆ. ಇದರಿಂದಾಗಿ ಮಠಕ್ಕೂ ಸಂಘಕ್ಕೂ ಅವಿನಾಭಾವ ಸಂಬಂಧ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಶೋಕ ಪೈ ಮಾತನಾಡಿ, ಸಂಘವು ನಡೆದು ಬಂದ ದಾರಿಯನ್ನು ವಿವರಿಸಿದರು.
ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಮಾರುತಿ ಸಂಘ ಯಾವುದೇ ಬ್ಯಾಂಕುಗಳಿಂದ ಸಾಲ ಪಡೆಯದೇ ಸಾಧನೆ ಮಾಡಿರುವುದು ಶ್ಲಾಘನೀಯ. ಬ್ಯಾಂಕ್‌ನಲ್ಲಿ ಉತ್ತಮ ಆಡಳಿತ ಮಂಡಳಿ, ಉತ್ತಮ ಶೇರುದಾರರು, ಗ್ರಾಹಕರು ಹಾಗೂ ಸಿಬ್ಬಂದಿ ಸಮ್ಮಿಳಿತವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಒಂದು ಸಂಸ್ಥೆ 25 ವರ್ಷ ಪೂರೈಸಿ ಜಿಲ್ಲೆಯಲ್ಲಿಯೇ ಒಂದು ಉತ್ತಮ ಸ್ವಂತ ಕಟ್ಟಡವನ್ನು ಹೊಂದಿದ್ದು ಸಂತಸದ ವಿಷಯವಾಗಿದೆ. ರಾಜ್ಯದಲ್ಲಿ ಅತಿ ಕಡಿಮೆ ಬಡ್ಡಿಗೆ ಸಾಲ ನೀಡುವುದಿದ್ದರೆ ಇಲ್ಲಿ ಮಾತ್ರ. ಡಿವಿಡೆಂಟ್ ಶೆ. 13 ನೀಡುತ್ತಿರುವುದು ಸಾಧನೆಯಾಗಿದೆ. ಸಿಬ್ಬಂದಿಗಳ ಉತ್ತಮ ಕಾರ್ಯ, ಸಾಲ ನೀಡುವುದು ಸಾಲ ವಸೂಲಾತಿಯೂ ಕೂಡಾ ಉತ್ತಮವಾಗಿದೆ ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ, ಲೆಕ್ಕ ಪರಿಶೋಧಕ ಎಂ.ಎಸ್. ಶೆಟ್ಟಿ ಮಾತನಾಡಿದರು. ಗ್ರಾಪಂ ಆಡಳಿತಾಧಿಕಾರಿ ರಾಘವೇಂದ್ರ ನಾಯ್ಕ, ಸಂಘದ ಉಪಾಧ್ಯಕ್ಷ ಉಮೇಶ ಕಾಮತ್, ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸಂಘದ ಸಾಲ ನೀಡಿಕೆ, ಠೇವಣಿ ಸಂಗ್ರಹಣೆ ಹಾಗೂ ಸತತ ಸಾಲ ವಸೂಲಾತಿಯಲ್ಲಿ ಮಾಡಿದ ನಿರಂತರವಾಗಿ ಸಾಧನೆ ಹಾಗೂ ರಜತ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಸಂಘದ ವ್ಯವಸ್ಥಾಪಕ ಪ್ರಸನ್ನ ಪ್ರಭು ಅವರನ್ನು ಆಡಳಿತ ಮಂಡಳಿ ಪರವಾಗಿ ಗುರುಗಳಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಮಾಜಿ ನಿರ್ದೇಶಕರು, ಹಿರಿಯ ನಿರ್ದೇಶಕರು, ಹಿರಿಯ ಸಿಬ್ಬಂದಿಯನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಅಶೋಕ ಪೈ ಹಾಗೂ ಉಪಾಧ್ಯಕ್ಷ ಉಮೇಶ ಕಾಮತ ಶ್ರೀಗಳ ಪಾದುಕಾ ಪೂಜೆ ನೆರವೇರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶಾನಭಾಗ ವರದಿ ವಾಚಿಸಿದರು. ನಿರ್ದೇಶಕ ನರೇಂದ್ರ ನಾಯಕ, ಸಂಘದ ವ್ಯವಸ್ಥಾಪಕ ಪ್ರಸನ್ನ ಪ್ರಭು ಹಾಗೂ ನಿರ್ದೇಶಕ ರವೀಂದ್ರ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net