ಕಾರವಾರ: ಒಂದೇ ಮನೆಯ ಆವರಣದಲ್ಲಿ ಆರು ಹೆಬ್ಬಾವುಗಳು ವಾಸವಿದ್ದು, ಅರಣ್ಯ ಇಲಾಖೆಯ ಅಽಕಾರಿಗಳು ಅವುಗಳನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.
ಕಾರವಾರ ಕಠಿಣಕೋಣದ ವಿಜಯ ತಳೇಕರ್ ಅವರ ಮನೆಯ ಆವರಣದಲ್ಲಿ ಒಂದು ಹೆಬ್ಬಾವು ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಆಗಮಿಸಿದ ಗೋಪಾಲ ನಾಯ್ಕ ಅವರು ಬಂದು ನೋಡಿದಾಗ ಇತರ ಹಾವುಗಳೂ ಒಂದೊAದಾಗಿ ಕಾಣಿಸಿಕೊಳ್ಳಲಾರಂಭಿಸಿದವು. 8 ರಿಂದ 12 ಅಡಿ ಉದ್ದವಿದ್ದ ಎಲ್ಲವನ್ನೂ ಹಿಡಿದು ಅವರು ಕಾಡಿಗೆ ಬಿಟ್ಟರು.
ಹೆಬ್ಬಾವುಗಳ ಸಂತಾನೋತ್ಪತ್ತಿಯ ಕಾಲವಾಗಿದ್ದು, ಒಂದು ಹೆಣ್ಣು ಹೆಬ್ಬಾವಿನ ಹುಡುಕಾಟದಲ್ಲಿ ಹಲವು ಬೇರೆ ಗಂಡು ಹಾವುಗಳು ಆಗಮಿಸುವುದಿದೆ ಎಂದು ಗೋಪಾಲ ನಾಯ್ಕ ಮಾಹಿತಿ ನೀಡಿದರು.