ಯಲ್ಲಾಪುರ ಐಸಿಟಿಯ ಸೋಮಶೇಖರ ನಾಯಕ ಅವರನ್ನು ರಾಣೆಬೆನ್ನೂರಿಗೆ, ಬಾಗಲಕೋಟೆ ಸಾಮಾಜಿಕ ವಿಭಾಗದ ಬಸವರಾಜ ಅರಿಶಿಣದ ಅವರನ್ನು ದಾಂಡೇಲಿ ಮರಮಟ್ಟು ಸಂಗ್ರಹಾಲಯಕ್ಕೆ, ಶಿರಸಿ ವಲಯದ ಗಿರೀಶ ನಾಯ್ಕ ಅವರನ್ನು ಹುಲೇಕಲ್ ವಲಯಕ್ಕೆ, ಹುಲೇಕಲ್ ವಲಯದ ಶಿವಾನಂದ ನಿಂಗಾಣಿ ಅವರನ್ನು ಕ್ಯಾದಗಿ ವಲಯಕ್ಕೆ, ಜಾನ್ಮನೆ ವಲಯದ ಉಷಾ ಕಬ್ಬೇರ ಅವರನ್ನು ಸಿದ್ದಾಪುರ ವಲಯಕ್ಕೆ, ಸಿದ್ದಾಪುರದ ಭವ್ಯಾ ನಾಯ್ಕ ಅವರನ್ನು ಶಿರಸಿ ವಲಯಕ್ಕೆ, ಗೇರುಸೊಪ್ಪ ವಲಯದ ಕಾರ್ತಿಕ ಕಾಂಬಳೆ ಅವರನ್ನು ಬನವಾಸಿ ವಲಯಕ್ಕೆ ಸಿದ್ದಾಪುರದ ಅಜಯಕುಮಾರ್ ಅವರನ್ನು ಸಾಗರ ವಲಯಕ್ಕೆ, ಶಿರಸಿ ಸಾಮಾಜಿಕ ಅರಣ್ಯ ವಿಭಾಗದ ಮಾರುತಿ ನಾಯ್ಕ ಅವರನ್ನು ಮಂಚಿಕೇರಿ ವಲಯಕ್ಕೆ, ಮಂಚಿಕೇರಿಯ ಬಸವರಾಜ ಭೋಜಳ್ಳಿ ಅವರನ್ನು ಇಡಗುಂದಿ ವಲಯಕ್ಕೆ, ಇಡಗುಂದಿಯ ಎಂ.ಎಚ್.ನಾಯ್ಕ ಅವರನ್ನು ಯಲ್ಲಾಪುರ ವಲಯಕ್ಕೆ ನಿಯೋಜಿಸಲಾಗಿದೆ. ಯಲ್ಲಾಪುರದ ವಿ.ಜಿ.ನರೇಶ ಅವರನ್ನು ಬಂಡಿಪುರಕ್ಕೆ, ಕತಗಾಲದ ಪ್ರೀತಿ ನಾಯ್ಕ ಅವರನ್ನು ಹೊನ್ನಾವರದ ಸಾಮಾಜಿಕ ಅರಣ್ಯ ವಿಭಾಗಕ್ಕೆ, ಹೊನ್ನಾವರದ ವಿ.ಎಸ್.ಬಂಟ್ ಅವರನ್ನು ಚಿಪ್ಪಬಳ್ಳಾಪುರಕ್ಕೆ, ರಾಮನಗುಳಿಯ ಸುರೇಶ ನಾಯಕ ಅವರನ್ನು ಹಿರೇಗುತ್ತಿಗೆ, ಅಂಕೋಲಾದ ಪ್ರಮೋದ ನಾಯಕ ಅವರನ್ನು ಹೊನ್ನಾವರಕ್ಕೆ ಹೊನ್ನಾವರದ ಸವಿತಾ ದೇವಾಡಿಗ ಅವರನ್ನು ಕುಮಟಾಕ್ಕೆ ಕುಮಟಾದ ಪ್ರವೀಣ ನಾಯಕ ಅವರನ್ನು ದಾಂಡೇಲಿಗೆ, ದಾಂಡೇಲಿಯ ಎನ್.ಎಲ್.ನದಾಫ ಅವರನ್ನು ಹಳಿಯಾಳಕ್ಕೆ, ಹಳಿಯಾಳದ ಬಸವರಾಜ ಅವರನ್ನು ಪಣಸೋಲಿ ವನ್ಯಜೀವಿ ವೀಭಾಗಕ್ಕೆ, ಪಣಸೋಲಿಯ ರವಿಕಿರಣ ಸಂಪಗಾವಿ ಅವರನ್ನು ಜೊಯಿಡಾಕ್ಕೆ ವರ್ಗಾಯಿಸಲಾಗಿದೆ.