ಮೃತರ ಕುಟುಂಬಗಳಿಗೆ ತಲಾ 15 ಲಕ್ಷ‌ರೂ ಪರಿಹಾರ

ಸಚಿವ ಮಂಕಾಳ ವೈದ್ಯ ಪರಿಹಾರ ವಿತರಿಸಿದರು.
ಸಚಿವ ಮಂಕಾಳ ವೈದ್ಯ ಪರಿಹಾರ ವಿತರಿಸಿದರು.
Published on
ಭಟ್ಕಳ: ಕಪ್ಪೆ‌ಚಿಪ್ಪು ತರಲು ಹೋದಾಗ ನದಿಯಲ್ಲಿ ಮುಳುಗಿ ಮೃತಪಟ್ಟ ಪಡು ಶಿರಾಲಿಯ ಕುಟುಂಬಗಳಿಗೆ ಸರ್ಕಾರದಿಂದ ತಲಾ 15 ಲಕ್ಷ ರೂ. ಪರಿಹಾರ ದೊರೆತಿದೆ.
ಸಚಿವ ಮಂಕಾಳ ವೈದ್ಯ ಅವರು ಮೃತರ ಮನೆಗಳಿಗೆ ತೆರಳಿ ಪರಿಹಾರಧನಸ ಚೆಕ್ ವಿತರಿಸಿದರು. 
ಮೀನುಗಾರಿಕೆ ಇಲಾಖೆಯಿಂದ ತಲಾ 15 ಲಕ್ಷ ರೂ. ಪರಿಹಾರ ದೊರಕಿದ್ದು, ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ದೊರಕಿದೆ. ಅಲ್ಲದೇ, ಮಂಕಾಳ ವೈದ್ಯ ವೈಯಕ್ತಿಕವಾಗಿಯೂ  ಕುಟುಂಬಗಳಿಗೆ ಹಣ ನೀಡಿ, ಸಾಂತ್ವನ ಹೇಳಿದರು. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ತಾವು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹಾಗೂ ಕಾಂಗ್ರೆಸ್ ಮುಖಂಡರು ಜತೆಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net