ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ (awareness) ಪಾದಯಾತ್ರೆ ಕುರಿತು ಶಿರಸಿಯಲ್ಲಿ ರವೀಂದ್ರ ನಾಯ್ಕ ಮಾಹಿತಿ ನೀಡಿದರು. ಇಬ್ರಾಹಿಂ ಗೌಡಳ್ಳಿ, ನಾಗರಾಜ ದೇವನಳ್ಳಿ ಇತರರಿದ್ದರು.
Published on:
Copied
Follow Us
ಶಿರಸಿ:ಅರಣ್ಯವಾಸಿಗಳಲ್ಲಿ ಕಾನೂನು ಅರಿವು ಜಾಗೃತಿ (awareness) ಮೂಡಿಸುವ ಉದ್ದೇಶದಿಂದ ಡಿ. 3ರಿಂದ 6ರವರೆಗೆ ಮುರ್ಡೇಶ್ವರದಿಂದ ಕಾರವಾರದವರೆಗೆ, 4 ದಿನಗಳ 132 ಕಿ.ಮೀ ಪಾದಯಾತ್ರೆ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ನಗರದ ಹೋರಾಟಗಾರರ ಕಾರ್ಯಾಲಯದಲ್ಲಿ ಗ್ರೀನ್ ಕಾರ್ಡ್ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾದಯಾತ್ರೆಯು ಕರಾವಳಿ ಭಾಗದ ಸುಮಾರು 47 ಗ್ರಾಮ ಪಂಚಾಯಿತಿಗೆ ಸಂಬಂಧಿಸಿ ಪ್ರತಿ ದಿನ ಸುಮಾರು 10 ರಿಂದ 11 ತಾಸಿನವರೆಗೆ ಪಾದಯಾತ್ರೆ ಮಾಡಲಾಗುವುದು.
ಪ್ರತಿ ತಾಲೂಕಿನಿಂದಲೂ ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಲು ತಿರ್ಮಾನಿಸಲಾಗಿದೆ.
ಪಾದಯಾತ್ರೆಯ ಅಂಗವಾಗಿ ಹತ್ತು ವಿವಿಧ ಉಪ ಸಮಿತಿಗಳನ್ನು ರಚಿಸಿ, ಪಾದಯಾತ್ರೆಯ ಯಶಸ್ಸಿಗೆ ರೂಪುರೇಷೆ ಮತ್ತು ಮಾರ್ಗದರ್ಶನ ನಿರ್ಧಿಷ್ಟಗೊಳಿಸಲಾಗಿದೆ ಎಂದರು.
ಡಿ. 3ರಂದು ಬೆಳಗ್ಗೆ 10 ಗಂಟೆಗೆ ಮುರ್ಡೇಶ್ವರದ ಮಹಾದ್ವಾರದಲ್ಲಿ ಪಾದಯಾತ್ರೆ ಉದ್ಘಾಟನೆಗೊಂಡು, ಮಧ್ಯಾಹ್ನ 3 ಗಂಟೆಗೆ ಹೊನ್ನಾವರದ ಶರಾವತಿ ಸೇತುವೆಗೆ ಪ್ರವೇಶಿಸಿ ಹೊನ್ನವರದಲ್ಲಿ ಬಹಿರಂಗ ಸಭೆ ನಡೆಯಲಿದೆ.
2ನೇ ದಿನ ಬೆಳಗ್ಗೆ 8 ಗಂಟೆಗೆ ಪಾದಯಾತ್ರೆ ಪ್ರಾರಂಭಗೊಂಡು 11 ಗಂಟೆಗೆ ಕುಮಟಾ ತಾಲೂಕಿನ ಗಿಬ್ ಹೈಸ್ಕೂಲ್ ಪ್ರವೇಶಿಸುವುದು. ತದನಂತರ 2 ನೇ ದಿನದ ಪಾದಯಾತ್ರೆ ಮಿರ್ಜಾನದಲ್ಲಿ ಅಂತ್ಯಗೊಳ್ಳುವುದು.
3 ನೇ ದಿನದ ಪಾದಯಾತ್ರೆಯು ಮಿರ್ಜಾನದಿಂದ ಸಾಗಿ ಮಧ್ಯಾಹ್ನ 3 ಗಂಟೆಗೆ ಅಂಕೋಲಾದ ಹೊನ್ನಾರಕ ದೇವಸ್ಥಾನ ಸರ್ಕಾಲ್ ಪ್ರವೇಶಿಸುವುದು. ಅಲ್ಲಿಂದ, ಸಾಗಿದ ಪಾದಯಾತ್ರೆಯು ಅವರ್ಸಾದವರೆಗೆ ಪೂರ್ಣಗೊಳ್ಳುವುದು.
ಕೊನೆ ದಿನದ ಪಾದಯಾತ್ರೆಯು ಅವರ್ಸಾದಿಂದ ಮಧ್ಯಾಹ್ನ 4 ಗಂಟೆಗೆ ಪ್ರಾರಂಭಗೊಂಡು ಬೆಳಗ್ಗೆ 10 ಗಂಟೆಗೆ ಲಂಡನ್ ಬ್ರಿಡ್ಜ್ ತಲುಪಲಿದೆ ಎಂದರು.