ಉತ್ತರ ಕನ್ನಡ 2 ಬ್ಯಾಲೆಟ್‌ ಯೂನಿಟ್‌ ಅಳವಡಿಕೆ ಸಾಧ್ಯತೆ

EVM_VVPAT
Published on

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಘೋಷಣೆಯಾದ ಚುನಾವಣೆಯ ನಾಮಪತ್ರ ಸಲ್ಲಿಕೆಯು ಏ 12 ರಿಂದ ಪ್ರಾರಂಭವಾಗಿದ್ದು, ಏ.19 ರಂದು ಮುಕ್ತಾಯವಾಗಲಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇರಲಿದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಸಾಯಂಕಾಲ ಕಣದ ಅಂತಿಮ ಚಿತ್ರಣ ಲಭ್ಯವಾಗಲಿದೆ.
ಎರಡು ಬ್ಯಾಲೆಟ್ ಯೂನಿಟ್ ಸಾಧ್ಯತೆ:
ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿರುವ ಐದನೇ ದಿನವಾದ ಗುರುವಾರ ಜಿಲ್ಲೆಯಲ್ಲಿ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ. ರಾಷ್ಟಿçÃಯ ಜನ ಸಂಭಾವನಾ ಪಕ್ಷದ ನಾಗರಾಜ ಶ್ರೀÃಧರ್ ಶೇಟ್, ಪಕ್ಷೇತರ ಅಭ್ಯರ್ಥಿ ಉಮೇಶ್ ದೈವಜ್ಞ, ಪ್ರಮೋದ್ ಮಡಗಾಂವಕರ್, ಅರವಿಂದ ಗೌಡ ಮತ್ತು ಸುಜಯ್ ಸುÃರ್ ಗೋಕರ್ಣ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮತ ಯಂತ್ರದ ಒಂದು ಭಾಗವಾಗಿರುವ ಬ್ಯಾಲೆಟ್ ಯೂನಿಟ್‌ನಲ್ಲಿ ಗರಿಷ್ಠ 16 ಹೆಸರು ಹಾಕಬಹುದು. ಒಂದು ನೋಟಾ ಕಡ್ಡಾಯವಾಗಿದ್ದರಿಂದ 15 ಅಭ್ಯರ್ಥಿಗಳ ಹೆಸರು ಹಾಕಲು ಅವಕಾಶವಿದೆ. ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ 17 ಅಭ್ಯರ್ಥಿಗಳಿಂದ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ. ಉಮೇದುವಾರಿಕೆ ಸಲ್ಲಿಕೆಗೆ ಇನ್ನೂ ಒಂದು ದಿನ ಅವಕಾಶವಿದೆ.
ಸದ್ಯದ ಪರಿಸ್ಥಿತಿ ನೋಡಿದರೆ ಪ್ರತಿ ಮತ ಕ್ಷೇತ್ರದಲ್ಲಿ ಎರಡೆರಡು ಬ್ಯಾಲೆಟ್ ಯುನಿಟ್ ಇಡಬೇಕಾದ ಪರಿಸ್ಥಿತಿ ಬರಲಿದೆ. ನಾಮಪತ್ರಗಳ ಪರಿಶೀಲನೆ ಹಾಗೂ ವಾಪಾಸ್ ಪಡೆಯಲು ಇರುವ ದಿನಾಂಕ ಮುಕ್ತಾಯವಾದ ನಂತರ ಅಂತಿಮ ಕಣ ಚಿತ್ರಣ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net