More

    ರಾಜ್ಯದ ಹಲವೆಡೆ 4 ದಿನ ಮಳೆ: ಏ.20ಕ್ಕೆ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಬಿರುಸು

    ಬೆಂಗಳೂರು:ರಾಜ್ಯದ ಹಲವೆಡೆ ಮುಂದಿನ 4 ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಗುರುವಾರ ಬೆಳಗಾವಿಯ ಯರಹಟ್ಟಿ, ಬೀದರ್​ನ ಭಾಲ್ಕಿ, ಮಂಡ್ಯ, ಹಾಸನದ ಬೇಲೂರು ಸೇರಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆ ಬಿದ್ದಿದೆ.

    ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಚಿತ್ರದುರ್ಗದಲ್ಲಿ ಏ.19ರಿಂದ ಏ.21ರವರೆಗೆ ಗುಡುಗು ಮಿಂಚು ಸಾಧಾರಣ ವರ್ಷಧಾರೆಯಾಗಲಿದೆ. ಆದರೆ, ಈ ಮೇಲಿನ ಜಿಲ್ಲೆಗಳಲ್ಲಿ ಏ.20 ರಂದು ಬಿರುಸಾಗಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ ಎರಡು ದಿನ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.

    ಅಲ್ಲು ಅರ್ಜುನ್ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ! ಇದೊಂದು ವಿಷಯದಿಂದ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ‘ಪುಷ್ಪ-2’

    ಏ.20ಕ್ಕೆ ಬೆಂಗಳೂರಿನಲ್ಲಿ ಮಳೆ
    ಬಿಸಿಲಿನಿಂದ ತತ್ತರಿಸಿರುವ ರಾಜಧಾನಿ ಬೆಂಗಳೂರಿಗೆ ಏ.20ರಿಂದ ಮಂದಿನ ಎರಡು ದಿನ ಮಳೆ ಸುರಿಯಲಿದೆ. ಮೂರು ತಿಂಗಳಿಂದ ಒಂದು ಹನಿಯೂ ಬಿದ್ದಿಲ್ಲ. ಇದರಿಂದಾಗಿ ನಗರದಲ್ಲಿ ಕನಿಷ್ಠ, ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ವಿಜಯನಗರದಲ್ಲಿ ಮುಂದಿನ ಎರಡು ದಿನ ಪೂರ್ವ ಮುಂಗಾರು ವರ್ಷಧಾರೆಯಾಗಲಿದೆ. ಏ.23ರಿಂದ ಮಳೆ ಕ್ಷೀಣವಾಗಲಿದ್ದು, ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.

    ಶೇ.66 ಮಳೆ ಕೊರತೆ
    ಮಾ.1ರಿಂದ ಏ.18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 26 ಮಿಮೀ ಮಳೆ ಸುರಿಯಬೇಕಿತ್ತು. ಆದರೆ, 9 ಮಿಮೀ ಸುರಿದಿದ್ದು, ಶೇ.66ರಷ್ಟು ಕೊರತೆಯಾಗಿದೆ. ವಿಜಯಪುರ, ಕಲಬುರಗಿಯಲ್ಲಿ ವಾಡಿಕೆಯಷ್ಟು ಮಳೆಯಾದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮಳೆ ಅಭಾವ ಉಂಟಾಗಿದೆ. ದಣ ಒಳನಾಡಿನಲ್ಲಿ ಶೇ.95, ಉತ್ತರ ಒಳನಾಡಿನಲ್ಲಿ ಶೇ.35, ಮಲೆನಾಡು ಶೇ. 69 ಹಾಗೂ ಕರಾವಳಿ ಶೇ.66 ಮಳೆ ಕೊರತೆಯಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts