More

    16 ಜಿಲ್ಲೆಗಳಲ್ಲಿ 40ರ ಗಡಿ ದಾಟಿದ ಉಷ್ಣಾಂಶ: 15 ಜಿಲ್ಲೆಗಳಲ್ಲಿ ಹೀಟ್​ವೇವ್​​

    ಬೆಂಗಳೂರು:ರಾಜ್ಯದ ಹಲವೆಡೆ ಮಳೆ ಕ್ಷೀಣವಾಗಿದ್ದ ಬೆನ್ನಲ್ಲೇ ಸೋಮವಾರ 16 ಜಿಲ್ಲೆಗಳಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ. ಮುಂದಿನ ಐದು ದಿನ 15 ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ಕೊಟ್ಟಿದೆ.

    ರಾಜ್ಯದಲ್ಲೇ ರಾಯಚೂರಿನಲ್ಲಿ 44 ಡಿ.ಸೆ.ದಾಖಲಾಗಿದೆ. ಯಾದಗಿರಿ 43.3, ಕೊಪ್ಪಳ 43, ಬಳ್ಳಾರಿ 42, ಕೋಲಾರ, ವಿಜಯಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೀದರ್​ 41, ಬಾಗಲಕೋಟೆ 40.3, ಕಲಬುರಗಿ, ಗದಗ, ಹಾವೇರಿ, ಚಿಕ್ಕಮಗಳೂರು, ಧಾರವಾಡ 40 ಡಿ.ಸೆ.ಉಷ್ಣಾಂಶ ಕಂಡಬಂದಿದೆ. ಈ ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 3-5 ಡಿ.ಸೆ.ಉಷ್ಣಾಂಶ ಹೆಚ್ಚು ದಾಖಲಾಗುತ್ತಿದೆ. ಶಿವಮೊಗ್ಗ 37.4, ಮಂಡ್ಯ, ಮೈಸೂರು 37, ಚಾಮರಾಜನಗರ 37 ಡಿ.ಸೆ.ಇದೆ. ಬೆಂಗಳೂರು ಸೇರಿ ಸುತ್ತಮುತ್ತ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನದಲ್ಲಿ 37 ಡಿ.ಸೆ. ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಕೊಡಗು, ಹಾಸನ, ಮೈಸೂರು, ಮಂಡ್ಯದಲ್ಲಿ ಮುಂದಿನ 24 ಗಂಟೆ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳಲಿದೆ. ಉಳಿದಡೆ ಒಣಹವೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಉಷ್ಣಾಂಶ ಹೆಚ್ಚಾಗಿದೆ. ಸಮತಟ್ಟಾದ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 40 ಡಿ.ಸೆ.ಏರಿದರೆ, ಗುಡ್ಡಗಾಡು ಪ್ರದೇಶಗಳಲ್ಲಿ 30 ಡಿ.ಸೆ. ಹೆಚ್ಚಳವಾದರೆ ಶಾಖ ಅಲೆ ಎಂದು ಕರೆಯಲಾಗುತ್ತದೆ. ತಾಪಮಾನ ಹೆಚ್ಚಳದಿಂದಾಗಿ ಜನರಿಗೆ ಊತ, ತಲೆನೋವು, ವಾಕರಿಕೆ, ರ್ನಿಜಲೀಕರಣ, ಸುಸ್ತು, ವಾಂತಿ ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆ ಬರಲಿವೆ.ಜ್ವರ ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ ಬಂದರೆ ಪ್ರಜ್ಞೆ ಬೀಳುವ ಅಪಾಯ ಜತೆಗೆ ಕೋಮಾಕ್ಕೂ ಹೋಗಿ ಪ್ರಾಣ ಕಳೆದುಕೊಳ್ಳಬಹುದು. ಹಾಗಾಗಿ, ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸಲಹೆ ನೀಡಿದೆ.

    ಕಿರಿಕ್​ ಪಾರ್ಟಿಯಲ್ಲಿ ರಶ್ಮಿಕಾ ಬದಲಿಗೆ ಸಾಯಿಪಲ್ಲವಿ ಇರಬೇಕಿತ್ತು: ಎಡವಟ್ಟು ಆಯ್ತಲ್ಲ ಎಂದ ನೆಟ್ಟಿಗರು!

    ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು
    ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, 1960ರಿಂದ 1990ರವರೆಗೆ ಹಾಗೂ 1997ರಿಂದ 2017ರವರೆಗೆ ಹವಾಮಾನದಲ್ಲಿ ಏನಲ್ಲಾ ಬದಲಾವಣೆಗಳಾಗಿವೆ ಎಂಬುದರ ಬಗ್ಗೆ 2 ಭಾಗಗಳಾಗಿ ವಿಗಂಡಿಸಿ ಅಧ್ಯಯನ ನಡೆಸಿತ್ತು. ಮೊದಲ 30 ವರ್ಷಗಳಲ್ಲಿ ಹವಾಮಾನ ಹೇಗಿತ್ತು. ನಂತರ, 30 ವರ್ಷ ಹವಾಮಾನಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಅಧ್ಯಯನದಲ್ಲಿ ವಾಡಿಕೆಗಿಂತ ಬಿಸಿಲು, ಮಳೆ, ಚಳಿ, ಗರಿಷ್ಠ,ಕನಿಷ್ಠ ತಾಪಮಾನದ ಉಷ್ಣಾಂಶ ಹೆಚ್ಚಳವಾಗಿರುವುದು ತಿಳಿದುಬಂದಿತ್ತು. ಮುಂದಿನ ಕೆಲ ವರ್ಷದಲ್ಲಿ ವಾಡಿಕೆಗಿಂತ 2 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹವಾಮಾನದ ಮೇಲೆ ಮಾನವ ಚಟುವಟಿಕೆ ಪ್ರಭಾವ, ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಳವಾಗುತ್ತಿದೆ.ಈಗಿನ ಹವಾಮಾನ ಬದಲಾವಣೆ ಜಾಗತಿಕ ತಾಪಮಾನ ಏರಿಕೆ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದೆ. ಜಾಗತಿಕ ತಾಪಮಾನ ಹೈಡ್ರಾಲಿಕ್​ ಚಕ್ರಗಳಲ್ಲಿನ ಬದಲಾವಣೆಗಳು, ಐಸ್​ ಮತ್ತು ಹಿಮನದಿಗಳ ಕರಗುವಿಕೆ, ಸಮುದ್ರ ಮಟ್ಟ ಹೆಚ್ಚಳ, ಬರ, ಉಷ್ಣತೆ, ಬಿಸಿಗಾಳಿ, ಮಳೆಗಾಲ ಅವಧಿ ಸೇರಿ ಇತರೆ ಅಂಶ ಬದಲಾವಣೆಯಾಗುತ್ತಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

    ಉಷ್ಣಾಂಶ ವಿವರ
    ಜಿಲ್ಲೆ            ತಾಪಮಾನ
    ರಾಯಚೂರು      44
    ಯಾದಗಿರಿ       43.3
    ಕೊಪ್ಪಳ          43
    ಬಳ್ಳಾರಿ          42

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts