

ಕಾರವಾರ:ಉತ್ತರ ಕನ್ನಡ ಹಾಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ವರ್ಗಾವಣೆಯಾಗಿದ್ದು, ನೂತನ ಎಡಿಸಿಯಾಗಿ ಪ್ರಕಾಶ ಗೂಪು ರಜಪೂತ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ರಾಜು ಮೊಗವೀರ ಈ ಹಿಂದೆ ಶಿರಸಿ ತಹಸೀಲ್ದಾರ್, ಎಸಿಯಾಗಿ ಕಾರ್ಯ ನಿರ್ವಹಿಸಿದ್ದರು. 2022 ರ ಫೆಬ್ರವರಿಯಿಂದ ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಸರಳ, ಶಾಂತ ನಡೆ, ಕಾರ್ಯ ನಿರ್ವಹಣೆಯಿಂದ ಪ್ರಸಿದ್ಧರಾಗಿದ್ದರು. ಈಗ ಅವರು ಬೆಂಗಳೂರಿನ ಬಿಬಿಎಂಪಿಗೆ ವರ್ಗಾವಣೆಯಾಗಿದ್ದಾರೆ.
ಪ್ರಕಾಶ ರಜಪೂತ ಅವರು ಮೂಲತಃ ವಿಜಯಪುರ ಜಿಲ್ಲೆಯವರು. ಬಿಎ ಬಿಎಡ್ ಪದವೀಧರರು. 2005 ರ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಎರಡುವರೆಗೆ ವರ್ಷ ಯಾದಗಿರಿ ಅಪರ ಜಿಲ್ಲಾಧಿಕಾರಿಯಾಗಿದ್ದರು. ನಂತರ ಕಲಬುರಗಿ ವಿಭಾಗದ ಭೂ ನಿರ್ವಹಣೆ ಮತ್ತು ಯೋಜನೆಯ ಅಪರ ಪ್ರಾದೇಶಿಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು.
ಎಡಿಸಿ ಬೀಳ್ಕೊಡುಗೆ:
ವರ್ಗಾವಣೆಯಾದ ರಾಜು ಮೊಗವೀರ ಅವರನ್ನು ಮಂಗಳವಾರ ಸಾಯಂಕಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀಳ್ಕೊಡಲಾಯಿತು.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಸನ್ಮಾನ ಸ್ವೀಕರಿಸಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಉದ್ಯೋಗ
ಅಧಿಕಾರಿಯಾಗಿ ಬಂದು, ತಶೀಲ್ದಾರರಾಗಿ, ಸಹಾಯಕ ಆಯುಕ್ತತರಾಗಿ ಹಾಗೆಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದು ವರ್ಷ ಏಳು
ತಿಂಗಳ ಕಾಲ ಅಪರ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದು ನನ್ನ ಆರನೇ ಯಶಸ್ಸು ಎಂದು
ಹೇಳಿದರು.
ಕರ್ತವ್ಯದಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯವಾಗಿದೆ ಅದನ್ನು ಎಲ್ಲರೂ ಅರಿತುಕೊಂಡು ಕರ್ತವ್ಯ ನಿರ್ವಹಿಸಿ,
ಯಾರಾದರೂ ಸಮಸ್ಯೆ ಎಂದು ಕಚೇರಿಯ ಬಳಿ ಬಂದಾಗ ಸ್ಪಂದಿಸಿ ಅವರ ಸ್ಥಾನದಲ್ಲಿ ನಿಂತು ತಕ್ಷಣ ಪರಿಹಾರ ಕೊಡಿಸಲು
ಪ್ರಯತ್ನಿಸಿ, ಪ್ರತಿಯೊಬ್ಬರು ಕಲಿಯುವುದು ತುಂಬಾ ಇದೆ. ನೂತನವಾಗಿ ಜಿಲ್ಲಾಡಳಿತದಲ್ಲಿ ಕರ್ತವ್ಯ ನಿರ್ವಹಿಸಲು ಬಂದವರಿಗೆ
ಮಾರ್ಗದರ್ಶನ ಮತ್ತು ಉತ್ತೇಜನ ನೀಡಿ ಎಲ್ಲರೂ ಒಗ್ಗಟ್ಟಿನಿಂದ, ಜಿಲ್ಲೆಯ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಿ. ಕಂದಾಯ ಇಲಾಖೆ
ಹಾಗೂ ಆರ್ ಟಿಸಿ, ಕೋರ್ಟ್ ಕೇಸಸ್ ಕೆಲಸಗಳನ್ನು ಕಲಿಯುವುದರಿಂದ ಮುಂದೆ ಸಾಕಷ್ಟು ಅವಕಾಶಗಳನ್ನು ಪಡೆಯಬಹುದು.
ಒಟ್ಟಾರೆಯಾಗಿ ನನಗೆ ಎಲ್ಲರೂ ಸಹಕಾರ ನೀಡಿರುವುದಕ್ಕೆ ನಿಮ್ಮಗೆ ಯಾವಾಗಲು ಚಿರಋಣಿ ಎಂದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು ಮನೆಗಿಂತ
ಹೆಚ್ಚು ಕಚೇರಿಯಲ್ಲೇ ಸಮಯ ಕಳೆಯಬೇಕಾಗುತ್ತದೆ. ಸಾರ್ವಜನಿಕರ ಸೇವೆ ಮಾಡಲು ದೇವರು ಒಂದು ಉತ್ತಮ ಅವಕಾಶವನ್ನು
ಕಲ್ಪಿಸಿದ್ದಾನೆ. ಅಂತಹ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಒಂದು ಅಂಶವು ಬಿಡದೆ ಸಂಪೂರ್ಣವಾಗಿ ಸಾರ್ವಜನಿಕರ ಸೇವೆ
ಮಾಡಿವುದರ ಮೂಲಕ ದೇಶ ಮತ್ತು ದೇವರನ್ನು ಕಾಣಬೇಕು. ಅದರಂತೆ ಅಪರ ಜಿಲ್ಲಾಧಿಕಾರಿ ಅವರು ತಮ್ಮ ಕರ್ತವ್ಯವನ್ನು ಶಿಸ್ತು
ಮತ್ತು ಸಮಯ ಪ್ರಜ್ಞೆಯಿಂದ ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿಗಳಾದ ಜಯಲಕ್ಷ್ಮೀ ರಾಯಕೋಡ್, ಆರ್. ದೇವರಾಜ, ಕಲ್ಯಾಣಿ ಕಾಂಬ್ಳೆ, ಡಾ.ನಯನಾ,
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೈಲ್ಲಾ ವರ್ಗಿಸ್, ತಹಸೀಲ್ದಾರರು, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು
ಮತ್ತಿತರರು ಇದ್ದರು,